ಕರ್ನಾಟಕ

karnataka

ETV Bharat / state

ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಪಾದಯಾತ್ರೆಗೆ ಪಕ್ಷಾತೀತ ಬೆಂಬಲ! - padayathre in hospet news

ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಬೇಕೆಂಬ ಬೇಡಿಕೆ ಇಟ್ಟುಕೊಂಡು ನಡೆಯುತ್ತಿರುವ ಪಾದಯಾತ್ರೆ, ಬಳ್ಳಾರಿ‌ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಆನಂದದೇವನಹಳ್ಳಿಗೆ ತಲುಪಿದ್ದು, ಪಕ್ಷಾತೀತವಾಗಿ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ.

padayathre for 2a reservation for panchamasali
ಪಾದಯಾತ್ರೆಗೆ ಪಕ್ಷಾತೀತ ಬೆಂಬಲ

By

Published : Jan 23, 2021, 1:15 PM IST

ಹೊಸಪೇಟೆ: ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ನಡೆಯುತ್ತಿರುವ ಪಾದಯಾತ್ರೆಗೆ ಪಕ್ಷಾತೀತವಾಗಿ ನಾಯಕರು ಬೆಂಬಲ ವ್ಯಕ್ತಪಡಿಸಿದರು.

2 ಎ ಮೀಸಲಾತಿಗಾಗಿ ಪಾದಯಾತ್ರೆ

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಚನ್ನಬಸವನಗೌಡ, ಬಿಜೆಪಿ‌ ಮುಖಂಡ ನೇಮಿರಾಜ ನಾಯ್ಕ್ ಸೇರಿದಂತೆ ಹಲವು‌‌ ನಾಯಕರು ಕೂಡಲಸಂಗಮದ ಪಂಚಮಸಾಲಿ ಪೀಠಾಧ್ಯಕ್ಷ ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರೊಂದಿಗೆ ಪಾದಯಾತ್ರೆ ಮಾಡಿದರು. ಪಂಚಮಸಾಲಿ ಮುಖಂಡ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಸಹ ಪಾದಯಾತ್ರೆ ನಡೆಸಿದ್ರು..

ಶಾಸಕ ಭೀಮಾನಾಯ್ಕ, ಬಿಜೆಪಿ ಜಿಲ್ಲಾ ಚನ್ನಬಸವಗೌಡ ಅವರನ್ನು ಪಕ್ಕದಲ್ಲಿ ಬನ್ನಿ ಎಂದು ಆಹ್ವಾನಿಸಿದರು. ಇದು ಪಕ್ಷಾತೀತ ಪಾದಯಾತ್ರೆ ಎಂದು ನಕ್ಕರು. ಬಳಿಕ ಚನ್ನಬಸವಗೌಡ ಅವರು ಶಾಕ ಭೀಮಾನಾಯ್ಕ ಅವರೊಂದಿಗೆ ಹೆಜ್ಜೆ ಹಾಕಿದರು. ಪಾದಯಾತ್ರೆಯಲ್ಲಿ‌ ನೂರಾರು ಜನರು ಭಾಗವಹಿಸಿದ್ದರು.

ಈ ಹಿಂದೆ ಹಗರಿಬೊಮ್ಮನಹಳ್ಳಿ ಪಟ್ಟಣ ಪಂಚಾಯಿತಿ‌ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕರ್ತರ ಮಧ್ಯೆ ಗಲಾಟೆಯಾಗಿತ್ತು. ಬಿಳಿಕ ಭೀಮಾನಾಯ್ಕ ಹಾಗೂ ನೇಮಿರಾಜ ನಾಯ್ಕ ಅವರ ಮಧ್ಯೆ ವಾಕ್ ಸಮರ ತಾರಕಕ್ಕೇರಿತ್ತು. ಈಗ ಪಾದಯಾತ್ರೆಯಲ್ಲಿ ಇಬ್ಬರೂ ನಾಯಕರು ಕಾಣಿಸಿಕೊಳ್ಳುವ ಮೂಲಕ ಅಚ್ಚರಿಸಿ ಮೂಡಿಸಿದ್ದಾರೆ.

ಇದನ್ನೂ ಓದಿ:ಹಸೆಮಣೆ ಏರಬೇಕಿದ್ದ ಹುಡುಗಿ ಮನೆಗೆ ನುಗ್ಗಿದ ಭೂಪ : ಸಿನಿಮೀಯ ರೀತಿ ತಾಳಿ ಕಟ್ಟಿ ನಿಂತಲ್ಲೇ ಹಾರ ಬದಲಾಯಿಸಿದ!

ABOUT THE AUTHOR

...view details