ಕರ್ನಾಟಕ

karnataka

ETV Bharat / state

ಸಿನಿಮಾ ಮಂದಿರದ ಕಾರ್ಮಿಕರಿಗೆ ರೇಷನ್ ವಿತರಿಸಿ ಮಾನವೀಯತೆ ಮೆರೆದ ಮಾಲೀಕ! - Movie theater workers

ಕೊರೊನಾ ಎಲ್ಲರನ್ನೂ ಬೆಂಬಿಡದೆ ಕಾಡುತ್ತಿದೆ. ಇದರ ಭೀತಿಗೆ ದೇಶವನ್ನೇ ಲಾಕ್​ಡೌನ್​ ಮಾಡಿದ ಪರಿಣಾಮ ಹಲವರು ಒಂದು ಹೊತ್ತಿನ ಊಟಕ್ಕೂ ಪರದಾಡವಂತಾಗಿದೆ. ಅದರಲ್ಲೂ ಇದು ಕೂಲಿ ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಿದೆ.

Owners who distribute ration to cinema workers
ಸಿನಿಮಾ ಮಂದಿರ ಕಾರ್ಮಿಕರಿಗೆ ರೇಷನ್ ವಿತರಿಸಿದ ಮಾಲೀಕರು

By

Published : Apr 3, 2020, 5:46 PM IST

ಬಳ್ಳಾರಿ:ಕೊರೊನಾ ವೈರಸ್ ಹರಡದಂತೆ ತಡೆಯಲು ದೇಶದಲ್ಲಿ ಲಾಕ್​​ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆ ಗಣಿನಾಡಿನ ಸಿನಿಮಾ ಮಂದಿದಲ್ಲಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಥಿಯೇಟರ್​ ಮಾಲೀಕರು ರೇಷನ್ ವಿತರಿಸುವ ಮೂಲಕ ಮಾನವೀಯತೆ ಮೆರದಿದ್ದಾರೆ.

ಲಾಕ್​​ಡೌನ್ ಆಗಿದ್ದರಿಂದ ಸಿನಿಮಾ ‌ಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಬಡ ಕೂಲಿ ಕಾರ್ಮಿಕರು ದಿನಗೂಲಿ ಇಲ್ಲದೇ ಊಟಕ್ಕಾಗಿ ಪರದಾಡುದನ್ನ ಮನಗಂಡ ಬಳ್ಳಾರಿ ನಗರದ ನಟರಾಜ ಚಿತ್ರಮಂದಿರದ ಮಾಲೀಕ ಲಕ್ಷ್ಮೀಕಾಂತ ರೆಡ್ಡಿ, ತಮ್ಮ ಸಿನಿಮಾ ಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಎಪ್ಪತ್ತು ಮಂದಿ ಕೂಲಿ ಕಾರ್ಮಿಕರಿಗೆ 25 ಕೆಜಿಯ ಒಂದು ಮೂಟೆ ಅಕ್ಕಿ, ಎಣ್ಣೆ ಹಾಗೂ ಬೇಳೆ ಸೇರಿದಂತೆ ಇನ್ನಿತರೆ ಮನೆ ಬಳಕೆ ಸಾಮಾಗ್ರಿಗಳನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸಿನಿಮಾ ಮಂದಿರಗಳು ಶುರುವಾದಾಗ ಕೂಲಿ ಕಾರ್ಮಿಕರು ನಮ್ಮ ಬಾಳ‌ ಬುತ್ತಿಯನ್ನ ತುಂಬಿಸಿದ್ದಾರೆ. ಆದರೀಗ ಕೊರೊನಾ ವೈರಸ್ ಎಫೆಕ್ಟ್ ದಿನಸಿ ಕೊಳ್ಳಲೂ ಅವರ ಬಳಿ ಹಣವಿರದಂತೆ ಮಾಡಿದೆ. ಹಾಗಾಗಿ ನಾನೀಗ ಅವರ ಬಾಳ ಬುತ್ತಿಯನ್ನ‌ ತುಂಬಲು‌ ಮುಂದಾಗಿರುವೆ ಅಷ್ಟೆ ಎಂದು ಚಿತ್ರಮಂದಿರ ಮಾಲೀಕ ಲಕ್ಷ್ಮೀಕಾಂತ್ ರೆಡ್ಡಿ ಹೇಳಿಕೊಂಡಿದ್ದಾರೆ.

ABOUT THE AUTHOR

...view details