ಕರ್ನಾಟಕ

karnataka

ETV Bharat / state

ಬಳ್ಳಾರಿ: ಸಂಜೀವರಾಯನಕೋಟೆ ಕೆರೆಗೆ ಬಿತ್ತು ಕೋಡಿ..! - rain bellary

ಬಳ್ಳಾರಿ ಜಿಲ್ಲೆಯಾದ್ಯಂತ ವ್ಯಾಪಕ ಮಳೆಯಾಗಿದ್ದು, ಮಳೆಯ ಅಬ್ಬರಕ್ಕೆ ಕೆರೆ ಕಟ್ಟೆಗಳೆಲ್ಲಾ ತುಂಬಿದ್ದು, ಸಂಜೀವರಾಯನಕೋಟೆ ಕೆರೆಗೆ ಕೋಡಿ ಬಿದ್ದಿದೆ.

ಕೆರೆಗೆ ಕೋಡಿ ಬಿದ್ದಿರುವುದು

By

Published : Oct 28, 2019, 11:55 AM IST

ಬಳ್ಳಾರಿ: ಗಣಿ ಜಿಲ್ಲೆಯಾದ್ಯಂತ ಸುರಿದ ಮಹಾ ಮಳೆಗೆ ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆ ಗ್ರಾಮದ ಕೆರೆಗೆ ಕೋಡಿ ಬಿದ್ದಿದೆ. ಗ್ರಾಮದ ಸುತ್ತಮುತ್ತಲಿನ ಪ್ರದೇಶ ವ್ಯಾಪ್ತಿಯ ಸರಿಸುಮಾರು 30 ಎಕರೆಗೂ ಅಧಿಕ ಬೆಳೆಗೆಈ ಮಹಾಮಳೆಯ ನೀರು ನುಗ್ಗಿದ್ದು,‌ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಕೆರೆಗೆ ಕೋಡಿ ಬಿದ್ದಿರುವುದು

ದೀಪಾವಳಿ ಅಮವಾಸ್ಯೆ ದಿನವಾದ ಸೋಮವಾರ ನಸುಕಿನ ವೇಳೆ ಬಳ್ಳಾರಿ ನಗರ, ತಾಲೂಕು ಸೇರಿ ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿದಿದೆ. ನಗರ ವ್ಯಾಪ್ತಿಯ ಸತ್ಯನಾರಾಯಣ ಪೇಟೆ, ಕನಕದುರ್ಗಮ್ಮ ದೇಗುಲದ ಹಾಗೂ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ರಸ್ತೆಗಳ ಕೆಳಸೇತುವೆಗಳು ಸಂಪೂರ್ಣವಾಗಿ ಮಳೆ ನೀರಿನಿಂದ ಜಲಾವೃತಗೊಂಡಿದ್ದು, ಸಾರ್ವಜನಿಕ ಸಂಚಾರಕ್ಕೂ ಅಡ್ಡಿಯುಂಟಾಗಿದೆ.

ABOUT THE AUTHOR

...view details