ಕರ್ನಾಟಕ

karnataka

ETV Bharat / state

ಭೂ ಸ್ವಾಧೀನ ಕಾಯ್ದೆ ತಿದ್ದುಪಡಿಗೆ ವಿರೋಧ.. SUCI ಮತ್ತು RKS ಸಂಘಟನೆಯಿಂದ ಪ್ರತಿಭಟನೆ

ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರಿವಾಜ್ಞೆ ಹೊರಡಿಸುವ ಮೂಲಕ ತಿದ್ದುಪಡಿ ಮಾಡಲು ಹೊರಟಿದೆ. ಇದು ರೈತ ವಿರೋಧಿ, ಕೃಷಿ ಕಾರ್ಮಿಕರ ವಿರೋಧಿ, ಜನ ವಿರೋಧಿ ಕ್ರಮ.

ಎಸ್.ಯು.ಸಿ.ಐ ಮತ್ತು ಆರ್.ಕೆ.ಎಸ್ ಸಂಘಟನೆ ಪ್ರತಿಭಟನೆ
ಎಸ್.ಯು.ಸಿ.ಐ ಮತ್ತು ಆರ್.ಕೆ.ಎಸ್ ಸಂಘಟನೆ ಪ್ರತಿಭಟನೆಎಸ್.ಯು.ಸಿ.ಐ ಮತ್ತು ಆರ್.ಕೆ.ಎಸ್ ಸಂಘಟನೆ ಪ್ರತಿಭಟನೆ

By

Published : Jun 16, 2020, 7:39 PM IST

ಬಳ್ಳಾರಿ :ರಾಜ್ಯ ಸರ್ಕಾರ ಭೂ ಸ್ವಾಧೀನ ಕಾಯ್ದೆ ತಿದ್ದುಪಡಿ ಮಾಡುತ್ತಿರುವುದನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಎಸ್‌ಯುಸಿಐ ಹಾಗೂ ಆರ್‌ಕೆಎಸ್‌ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಎಸ್‌ಯುಸಿಐ ಮತ್ತು ಆರ್‌ಕೆಎಸ್ ಸಂಘಟನೆ ಪ್ರತಿಭಟನೆ

ಈ ವೇಳೆ ಎಸ್‌ಯುಸಿಐ ಸಂಘಟನೆಯ ಕೆ. ಸೋಮಶೇಖರ್ ಅವರು ಮಾತನಾಡಿ, ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಯನ್ನು ಸುಗ್ರಿವಾಜ್ಞೆ ಹೊರಡಿಸುವ ಮೂಲಕ ತಿದ್ದುಪಡಿ ಮಾಡಲು ಹೊರಟಿದೆ. ಇದು ರೈತ ವಿರೋಧಿ, ಕೃಷಿ ಕಾರ್ಮಿಕರ ವಿರೋಧಿ, ಜನ ವಿರೋಧಿ ಕ್ರಮವಾಗಿದೆ ಎಂದು ದೂರಿದರು. ಇದನ್ನು ಕೂಡಲೇ ವಾಪಸ್​ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಎಸ್‌ಯುಸಿಐ ಹಾಗೂ ಆರ್‌ಕೆಎಸ್ ಸಂಘಟನೆ ವತಿಯಿಂದ ಪ್ರತಿಭಟನೆ

ಸರ್ಕಾರ ಭೂ ಸುಧಾರಣಾ ಕಾಯ್ದೆ 1961ರಲ್ಲಿ ತಿದ್ದುಪಡಿ ತಂದು ಕಾಯ್ದೆ ಕಲಂ 79ಎ,ಬಿ,ಸಿ ಮತ್ತು 80ನ್ನು ತೆಗೆದು ಹಾಕಲು ಕರಡು ಮಸೂದೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುತ್ತದೆ. ಆದರೆ, ಜನರು ಇದನ್ನು ಒಪ್ಪುವುದಿಲ್ಲ ಎಂದರು.

ABOUT THE AUTHOR

...view details