ಕರ್ನಾಟಕ

karnataka

ETV Bharat / state

ಮಹಿಳೆ ಅಂತ್ಯಕ್ರಿಯೆಗೆ ವಿರೋಧ: ರುದ್ರಭೂಮಿಯಲ್ಲೇ ಸಾರ್ವಜನಿಕರ ಪ್ರತಿಭಟನೆ - ಕೊರೊನಾ ಸೋಂಕಿತ ಮಹಿಳೆ ಅಂತ್ಯಕ್ರಿಯೆಗೆ ವಿರೋಧ ಸುದ್ದಿ

ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಕೊರೊನಾ ಸೋಂಕಿತ ಮಹಿಳೆಯ ಮೃತದೇಹವನ್ನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಮಹಿಳೆಯ ಸಂಬಂಧಿಕರು ಮುಂದಾದಾಗ, ವಾಜಪೇಯಿ ಬಡಾವಣೆಯ‌ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ಕೊರೊನಾ ಸೋಂಕಿತ ಮಹಿಳೆ ಅಂತ್ಯಕ್ರಿಯೆಗೆ ವಿರೋಧ
ಕೊರೊನಾ ಸೋಂಕಿತ ಮಹಿಳೆ ಅಂತ್ಯಕ್ರಿಯೆಗೆ ವಿರೋಧ

By

Published : Jun 24, 2020, 8:32 AM IST

ಬಳ್ಳಾರಿ: ಕೊರೊನಾ ಸೋಂಕಿತ‌ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಶವಸಂಸ್ಕಾರಕ್ಕೆ ಗಣಿನಗರಿಯ ನಾಗರಿಕರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ.

ಬಳ್ಳಾರಿ ನಗರದ ಸಂಗನಕಲ್ಲು ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಈ ಕೊರೊನಾ ಸೋಂಕಿತ ಮಹಿಳೆಯ ಮೃತದೇಹವನ್ನ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಲು ಮಹಿಳೆಯ ಸಂಬಂಧಿಕರು ಮುಂದಾದಾಗ, ವಾಜಪೇಯಿ ಬಡಾವಣೆಯ‌ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಗಿಳಿದರು.

ಈ ವಿಷಯ ತಿಳಿಯುತ್ತಿದ್ದಂತೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರರೆಡ್ಡಿ ರುದ್ರಭೂಮಿಗೆ ತಕ್ಷಣವೇ ಆಗಮಿಸಿದರು, ಪ್ರತಿಭಟನಾಕಾರರ ಮನವೊಲಿಸುವ ಬದಲಿಗೆ ತಾವೇ ಸ್ವತಃ ಅವರೊಂದಿಗೆ ಪ್ರತಿಭಟನೆಗಿಳಿದರು. ಈ ಮೂಲಕ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯ ನಿವಾಸಿಗಳ ಜತೆ ಸೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ABOUT THE AUTHOR

...view details