ಕರ್ನಾಟಕ

karnataka

ETV Bharat / state

ವಿಜಯನಗರ ಜಿಲ್ಲೆ ರಚನೆಯಿಂದ ಬಳ್ಳಾರಿ ಜೊತೆ ಭಾವನಾತ್ಮಕ‌ ಸಂಬಂಧ ಕಡಿತ - District President of Welfare Karnataka Struggle Committee Sirigiri Pannaraj

ಅಭಿವೃದ್ಧಿ ಎಂಬ ಹೆಸರಿನಲ್ಲಿ ಜಿಲ್ಲೆಯನ್ನು ಇಬ್ಭಾಗ ಮಾಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

Opposition to formation of Vijayanagar district
ವಿಜಯನಗರ ಜಿಲ್ಲೆ ರಚನೆ

By

Published : Nov 25, 2020, 11:00 PM IST

ಹೊಸಪೇಟೆ: ವಿಜಯನಗರ ಜಿಲ್ಲೆ ರಚನೆಯಾಗುವುದರಿಂದ ಬಳ್ಳಾರಿಯೊಂದಿಗೆ ಭಾವನಾತ್ಮಕ‌ ಸಂಬಂಧ ಕಡಿತಗೊಳ್ಳಲಿದೆ.‌ ಹಂಪಿ ಹಾಗೂ ತುಂಗಭದ್ರಾ ಜಲಾಶಯ ಜಿಲ್ಲೆಯಿಂದ ಹೊರಗೆ ಉಳಿಯಲಿವೆ. ಇದು ಜಿಲ್ಲೆಯ ಜನತೆಗೆ ಊಹಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ.‌ ಅಭಿವೃದ್ಧಿ ಎಂಬ ಹೆಸರಿನಲ್ಲಿ ಜಿಲ್ಲೆಯನ್ನು ಇಬ್ಭಾಗ ಮಾಡುತ್ತಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಕ್ರಿ.ಶ. 1799ರಲ್ಲಿ ಮೈಸೂರು ಸಂಸ್ಥಾನದ ಟಿಪ್ಪು ಸುಲ್ತಾನ್ ಮರಣ ಹೊಂದುತ್ತಾನೆ. ಆಗ ಬ್ರಿಟಿಷ್ ಸರ್ಕಾರ ಮದ್ರಾಸ್ ಪ್ರಾಂತ್ಯವನ್ನು ರಚನೆ ಮಾಡುತ್ತದೆ. ಬಳ್ಳಾರಿ ನಗರವು 20 ತಾಲೂಕುಗಳನ್ನು ಒಳಗೊಂಡಿರುವಂತೆ ಜಿಲ್ಲೆಯನ್ನು ರಚನೆ ಮಾಡಲಾಗುತ್ತದೆ.‌ ಬಳಿಕ ಆಡಳಿತಾತ್ಮಕ ಬದಲಾವಣೆಗಳಾಗುತ್ತವೆ‌. ಜಿಲ್ಲೆಯನ್ನು ಪೂರ್ವ ತಾಲೂಕು ಹಾಗೂ ಪಶ್ಚಿಮ ತಾಲೂಕುಗಳಾಗಿ ವಿಂಗಡನೆ ಮಾಡಲಾಗುತ್ತದೆ.‌ ಬಳ್ಳಾರಿ ಹಾಗೂ ಹೊಸಪೇಟೆಗಳಲ್ಲಿ ಉಪವಿಭಾಗಗಳನ್ನು ರಚನೆ ಮಾಡಲಾಗುತ್ತದೆ.‌

ಸಂಶೋಧಕ‌ ಮೃತ್ಯುಂಜಯ ರುಮಾಲೆ

ತುಂಗಭದ್ರಾ ಜಲಾಶಯ ನಿರ್ಮಾಣ ಹೋರಾಟದಲ್ಲಿ ಬಳ್ಳಾರಿ ಜನತೆ ಪಾತ್ರ ಮಹತ್ವದ್ದಾಗಿದೆ. ಅದು ವಿಜಯನಗರ ಜಿಲ್ಲೆ ರಚನೆಯಿಂದ ಕಡಿತಗೊಳ್ಳಲಿದೆ. ಜಲಾಶಯದ‌ ನೀರನ್ನು ಬಳಕೆ ಮಾಡಿಕೊಳ್ಳಲು ಕೇಳಿಕೊಳ್ಳುವ ಪರಿಸ್ಥಿತಿ ಉದ್ಭವಾಗಲಿದೆ ಎಂಬುದು ಬಳ್ಳಾರಿ ಅಖಂಡವಾಗಿರಲಿ ಎಂಬ ಹೋರಾಟಗಾರರ ಅಭಿಪ್ರಾಯವಾಗಿದೆ.‌

ವಿಜಯನಗರ ಜಿಲ್ಲೆಯಿಂದ ವಿಶ್ವ ಮಾನ್ಯತೆ ಗಳಿಸಿರುವ ಹಂಪಿ ಪ್ರವಾಸಿ ತಾಣ ಬಳ್ಳಾರಿ ಕೈ ತಪ್ಪಲಿದೆ. ಇದು ಪ್ರವಾಸೋದ್ಯಮಕ್ಕೆ ಪೆಟ್ಟು ನೀಡಲಿದೆ.‌‌ ಹಂಪಿಗೆ ದೇಶ-ವಿದೇಶಗಳಿಂದ ಜನರು ಆಗಮಿಸುತ್ತಾರೆ.‌ ಇದು ಜಿಲ್ಲಾ ಬೆಳವಣಿಗೆ ಸಹಕಾರಿಯಾಗಿದೆ.‌

ಪಶ್ಚಿಮ ತಾಲೂಕುಗಳಲ್ಲಿ ಐತಿಹಾಸಿಕ ಸ್ಮಾರಕ ಹಾಗೂ ಇತಿಹಾಸ ವಿಜಯನಗರ ಜಿಲ್ಲೆಗೆ ಸೇರ್ಪಡೆಗೊಳ್ಳಲಿದೆ.‌ ಇದು ಬಳ್ಳಾರಿ ಜಿಲ್ಲೆಗೆ ಮತ್ತೊಂದು ಹಿನ್ನಡೆಯಾಗಿದೆ. ಕೂಡ್ಲಿಗಿ ತಾಲೂಕಿನಲ್ಲಿ ಗಾಂಧೀಜಿ ಚಿತಾ ಭಸ್ಮ ಸ್ಮಾರಕ ಹಾಗೂ ಗುಡೇಕೋಟೆಯಲ್ಲಿರುವ ಕರಡಿ ಧಾಮ ಏಷ್ಯದ ಪ್ರಮುಖ ಕರಡಿ ಧಾಮಗಳಲ್ಲಿ ಒಂದಾಗಿದೆ. ಇನ್ನು ಹಗರಿಬೊಮ್ಮನಹಳ್ಳಿ ತಾಲೂಕಿನ‌‌‌ ಅಂಕಸಮುದ್ರ ಕೆರೆ ಪಕ್ಷಿಧಾಮವಿದ್ದು, ಪಕ್ಷಿಪ್ರೇಮಿಗಳಿಗೆ ಅಚ್ಚು ಮೆಚ್ಚಿನ ತಾಣವಾಗಿದೆ. ಹೂವಿನಹಡಗಲಿ ಮೈಲಾರ ಲಿಂಗೇಶ್ವರ ಕಾರ್ಣಿಕ ರಾಜ್ಯದಲ್ಲಿ ಪ್ರಸಿದ್ಧಿ ಪಡೆದಿದೆ.‌

ಭರತ ಹುಣ್ಣಿಮೆಗೆ ನಡೆಯುವ ಜಾತ್ರೋತ್ಸವದಲ್ಲಿ ಸಾವಿರಾರು ಜನರು ಒಂದು ಕಡೆ ಸೇರಿಕೊಳ್ಳುತ್ತಾರೆ. ಇಲ್ಲಿ ನಡೆಯುವ ಗೊರವಪ್ಪ ನುಡಿ ಕಾರ್ಣಿಕೋತ್ಸವ ಪ್ರಚಲಿತ ವಿದ್ಯಮಾನ ತಿಳಿಸುವ ಭವಿಷ್ಯವಾಣಿ ಎಂಬುದು ಭಕ್ತರ ನಂಬಿಕೆಯಾಗಿದೆ. ಹರಪನಹಳ್ಳಿ ತಾಲೂಕಿನ ಉಚ್ಛಂಗಿ ದುರ್ಗ ಕೋಟೆ ಸೇರಿ ಐತಿಹಾಸಿಕ ಸ್ಥಳಗಳನ್ನು ಕಾಣಬಹುದು.‌ ಕೊಟ್ಟೂರು ತಾಲೂಕಿನ ಉಜ್ಜಯಿನಿ ಜಗದ್ಗುರು ಶ್ರೀ ಮರಳಾರಾಧ್ಯರು ಸ್ಥಾಪಿಸಿದ ಉಜ್ಜಯಿನಿ ಸದ್ಧರ್ಮ ಪೀಠ ವೀರಶೈವ ಪಂಚ ಪೀಠಗಳಲ್ಲಿ ಅತ್ಯಂತ ಪ್ರಮುಖವಾದ ಸದ್ಧರ್ಮ ಪೀಠವಾಗಿದೆ.‌ ಶ್ರೀ ಮರಳಸಿದ್ದೇಶ್ವರರ ಲಿಂಗೈಕ್ಯ ಸಂಜೀವಿನಿ ಗದ್ದುಗೆ ಹೊಯ್ಸಳ ಮತ್ತು ಚಾಲುಕ್ಯ ಶೈಲಿಯ ಶಿಲ್ಪ ಕಲೆಯ ಸುಂದರ ಕೆತ್ತನೆಗಳಿವೆ. ಹಂಪಿಯ ಹೊರಗೆ ನೋಡಬೇಕು, ಉಜ್ಜಯಿನಿ ಒಳಗೆ ನೋಡಬೇಕು ಎಂಬ ನಾಣ್ಣುಡಿ ಪ್ರಚಲಿತದಲ್ಲಿದೆ.‌

ಈಟಿವಿ ಭಾರತದೊಂದಿಗೆ ದೂರವಾಣಿ ಮೂಲಕ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಸಿರಿಗೇರಿ ಪನ್ನರಾಜ್ ಮಾತನಾಡಿ, ಬಳ್ಳಾರಿ ಜಿಲ್ಲೆ ಅಖಂಡವಾಗಿರಲಿ. ವಿಜಯನಗರ ಜಿಲ್ಲೆ ರಚನೆಯಿಂದ ಪಶ್ಚಿಮ ತಾಲೂಕುಗಳು ಅಭಿವೃದ್ಧಿ ಎನ್ನುತ್ತಿದ್ದಾರೆ.‌ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.‌ ಕಲ್ಯಾಣ ಕರ್ನಾಟಕದಲ್ಲಿ ಶುದ್ಧ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ.‌ ತುಂಗಭದ್ರಾ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ.‌ ಹೂಳನ್ನು ತಗೆಯುವುದರಿಂದ ಸಾಕಷ್ಟು ಅಭಿವೃದ್ಧಿಯಾಗಲಿದೆ.‌ ಜಿಲ್ಲೆಯಲ್ಲಿ ಸೌಲಭ್ಯಗಳನ್ನು ಹೊಸಪೇಟೆಯಲ್ಲಿ‌ ಮಾಡಲಿ. ಈಗ ಪ್ರತಿಯೊಂದು ಆನ್​ಲೈನ್ ವ್ಯವಸ್ಥೆ ಇದೆ.‌ ಪ್ರತಿಯೊಂದಕ್ಕೂ ಜಿಲ್ಲೆಗೆ ಬರವಂತಿಲ್ಲ.‌ ಯಾಕೆ ವಿಜಯನಗರ ಜಿಲ್ಲೆ‌ ಮಾಡಲಾಗುತ್ತಿದೆ.‌ ಅಲ್ಲದೆ ವಿಜಯನಗರ ಜಿಲ್ಲೆಯಾಗಿರುವುದರಿಂದ ಗಡಿಭಾಗದ ಕೂಗಿಗೆ ಹೊಡೆತ ಬೀಳಲಿದೆ.‌ ಬಳ್ಳಾರಿ ಜಿಲ್ಲೆಯಲ್ಲಿ ಈಗ 11 ಶಾಸಕರು ಇದ್ದಾರೆ.‌ ಜಿಲ್ಲೆ ಇಬ್ಭಾಗದಿಂದ ಶಾಸಕರ ಸಂಖ್ಯೆ ಕುಸಿಯಲಿದೆ. ಇದು ಗಡಿಭಾಗದ ಕೂಗಿಗೆ ಹಿನ್ನಡೆಯಾಗಲಿದೆ.‌ 1953ರಲ್ಲಿ ಜನಮತದಿಂದ ಬಳ್ಳಾರಿ ತಾಲೂಕು ಮೈಸೂರು ಸಂಸ್ಥಾನಕ್ಕೆ ಸೇರ್ಪಡೆಯಾಯಿತು.‌ ಅದು ಬಳ್ಳಾರಿ ಅಖಂಡತೆಯಿಂದ ಸಾಧ್ಯವಾಗಿತ್ತು.‌ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಂಶೋಧಕ‌ ಮೃತ್ಯುಂಜಯ ರುಮಾಲೆ ಮಾತನಾಡಿ, ಬಳ್ಳಾರಿ ರಚನೆಯಾಗಿದ್ದು ಕ್ರಿ.ಶ. 1800ರಲ್ಲಿ. 20 ತಾಲೂಕುಗಳನ್ನು ಒಳಗೊಂಡಂತಹ ನಗರವನ್ನು ಜಿಲ್ಲೆಯನ್ನಾಗಿ‌ ಮಾಡಲಾಯಿತು. ವಿಶಾಲ ಬಳ್ಳಾರಿಯೆಂದು ಪರಿಗಣಿಸಲಾಯಿತು. ಬಳಿಕ ಪೂರ್ವ ತಾಲೂಕುಗಳಿಗೆ ಬಳ್ಳಾರಿ ಹಾಗೂ ಪಶ್ಚಿಮ ತಾಲೂಕುಗಳಿಗೆ ಹೊಸಪೇಟೆ ಉಪವಿಭಾಗ ಕಚೇರಿಯನ್ನು ಸ್ಥಾಪಿಸಲಾಯಿತು ಎಂದು ಹೇಳಿದರು.

ABOUT THE AUTHOR

...view details