ಕರ್ನಾಟಕ

karnataka

ETV Bharat / state

ಒಂದು ದಿನದ ಹಂಪಿ ಉತ್ಸವಕ್ಕೆ ಕಲಾವಿದರ ವೇದಿಕೆಯಿಂದ ವಿರೋಧ - celebration of one-day Hampi festival

ಇಂತಹ ಉತ್ಸವವನ್ನು ಕೇವಲ‌ ಕಾಟಾಚಾರಕ್ಕೆ ಆಚರಿಸುವುದು ಬೇಡ, ಕೊರೊನಾ ಎನ್ನುವುದಾದ್ರೆ ಬರುವ ಜನವರಿ ತಿಂಗಳಲ್ಲಿ‌ ಆಚರಿಸಲಿ. ಆದ್ರೆ, ಈ ಒಂದು ದಿನದ ಉತ್ಸವ ಬೇಡ..

ಒಂದು ದಿನದ ಹಂಪಿ ಉತ್ಸವಕ್ಕೆ ಕಲಾವಿದರ ವೇದಿಕೆಯಿಂದ ವಿರೋ
ಒಂದು ದಿನದ ಹಂಪಿ ಉತ್ಸವಕ್ಕೆ ಕಲಾವಿದರ ವೇದಿಕೆಯಿಂದ ವಿರೋ

By

Published : Nov 8, 2020, 4:19 PM IST

Updated : Nov 8, 2020, 5:05 PM IST

ಬಳ್ಳಾರಿ :ಹಂಪಿ ಉತ್ಸವವನ್ನು ಒಂದು ದಿನದ ಮಟ್ಟಿಗೆ ಆಚರಿಸುತ್ತಿರುವುದನ್ನು ಖಂಡಿಸಿ ಮತ್ತು ಮೂರು ದಿನಗಳ ಕಾಲ ನಡೆಸಬೇಕೆಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಮತ್ತು ನವ ಕರ್ನಾಟಕ ಯುವ ಶಕ್ತಿ ಸಂಘಟನೆಯಿಂದ ಪ್ರತಿಭಟನೆ ನಡೆಸಲಾಯಿತು.

ಒಂದು ದಿನದ ಹಂಪಿ ಉತ್ಸವಕ್ಕೆ ಕಲಾವಿದರ ವೇದಿಕೆಯಿಂದ ವಿರೋಧ

ಹಂಪಿ ಉತ್ಸವದ ಘನತೆ ಕಾಪಾಡಿ ಮೂರು ದಿನ‌ ಉತ್ಸವ ಮಾಡಿ, ನೀವು‌ ಮಾಡೋದು ತುಂಗಾ ಆರತಿ, ನಿಮಗೆ ಗೊತ್ತಿಲ್ಲ ಹಂಪಿ ಉತ್ಸವದ ಕೀರ್ತಿ, ಹೀಗೆ ಹಲವು ಘೋಷಣೆಗಳ ಫಲಕಗಳನ್ನು ಮತ್ತು ತೊಗಲು ಗೊಂಬೆಗಳನ್ನು ಹಿಡಿದು ನಗರದ ನಾರಾಯಣ ರಾವ್ ಉದ್ಯಾನವನದಿಂದ ಗಡಿಗಿ ಚೆನ್ನಪ್ಪ ವೃತ್ತದವರಗೆ ಪ್ರತಿಭಟನೆ ನಡೆಸಲಾಯಿತು.

ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಸಂಚಾಲಕ ಕೆ. ಜಗದೀಶ್ ಮತ್ತು ನವಕರ್ನಾಟಕ ಯುವಶಕ್ತಿಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ್ ಮಾತನಾಡಿ, ಹಂಪಿ‌ ಉತ್ಸವ ದೇಶ -ವಿದೇಶದ ಕಲಾವಿದರ ಪ್ರದರ್ಶನ ಮತ್ತು ಪ್ರವಾಸಿಗರ ವೀಕ್ಷಣೆಯಿಂದ ಮಹತ್ವ ಪಡೆದಿದೆ.

ಒಂದು ದಿನದ ಹಂಪಿ ಉತ್ಸವಕ್ಕೆ ಕಲಾವಿದರ ವೇದಿಕೆಯಿಂದ ವಿರೋ

ಇಂತಹ ಉತ್ಸವವನ್ನು ಕೇವಲ‌ ಕಾಟಾಚಾರಕ್ಕೆ ಆಚರಿಸುವುದು ಬೇಡ, ಕೊರೊನಾ ಎನ್ನುವುದಾದ್ರೆ ಬರುವ ಜನವರಿ ತಿಂಗಳಲ್ಲಿ‌ ಆಚರಿಸಲಿ. ಆದ್ರೆ, ಈ ಒಂದು ದಿನದ ಉತ್ಸವ ಬೇಡ ಎಂದರು.

Last Updated : Nov 8, 2020, 5:05 PM IST

ABOUT THE AUTHOR

...view details