ಬಳ್ಳಾರಿ :ನಗರದ ರೇಡಿಯೋ ಪಾರ್ಕ್ನಲ್ಲಿರುವ ಕಿರು ಮೃಗಾಲಯದಲ್ಲಿನ ಪ್ರಾಣಿಗಳನ್ನು ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಮೃಗಾಲಯಕ್ಕೆ ಸ್ಥಳಾಂತರ ಮಾಡುವ ವಿಚಾರ ಸಾರ್ವಜನಿಕರನ್ನು ಮತ್ತು ಪ್ರಾಣಿ ಪಕ್ಷಿ ಪ್ರೇಮಿಗಳನ್ನು ಆತಂಕಕ್ಕೆ ಕಾರಣವಾಗಿದೆ..
ರೇಡಿಯೋ ಪಾರ್ಕ್ ಕಿರು ಮೃಗಾಲಯದಲ್ಲಿನ ಪ್ರಾಣಿ ಪಕ್ಷಿಗಳನ್ನು ಹೊಸಪೇಟೆ ತಾಲೂಕಿನ ಕಮಲಾಪುರದ ಹತ್ತಿರವಿರುವ ಅಟಲ್ ಬಿಹಾರಿ ವಾಜಪೇಯಿ ಝೂಲಾಜಿಕಲ್ ಬೃಹತ್ ಮೃಗಾಲಯಕ್ಕೆ ಸ್ಥಳಾಂತರ ಮಾಡಿದರೇ ಉಗ್ರ ಹೋರಾಟ ಮಾಡುತ್ತೇವೆ ಎಂದು ಸ್ನೇಕ್ ಸಮೀರ್ ಶೆಟ್ಟ್ ಸಾಬ್ರಿ ಮತ್ತು ಮಾನವ ಹಕ್ಕುಗಳ ಹೋರಾಟ ಸಮಿತಿಯ ಮೋಹನ್ ಬಾಬು ಎಚ್ಚರಿಕೆಯನ್ನು ನೀಡಿದ್ದಾರೆ.
1981ರಲ್ಲಿ ಮಾಜಿ ಶಾಸಕ ಭಾಸ್ಕರ್ ನಾಯ್ಡು ಅವರ ಹೋರಾಟದ ಪ್ರತಿಫಲದಿಂದ ಈ ಕಿರು ಮೃಗಾಲಯ ಆರಂಭವಾಗಿದೆ. ಮಾಜಿ ಮುಖ್ಯಮಂತ್ರಿ ಗುಂಡುರಾವ್ ಮತ್ತು ಮಾಜಿ ಅರಣ್ಯ ಸಚಿವ ಮಾದೇಗೌಡ್ರು ಈ ಮೃಗಾಲಯವನ್ನು ಉದ್ಘಾಟನೆ ಮಾಡಿದ್ದರು.
ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಕೆ
ಮೋಹನ್ ಮತ್ತು ಸಮಿರ್ ಶೆಟ್ ಇಬ್ಬರು ಸೇರಿ, ವನ್ಯ ಜೀವಿಯ ಪ್ರಿನ್ಸಿಪಾಲ್ ಚೀಫ್ ಕಂಜುವೆಟ್ ಸಂಜಯ್ ಮೋಹನ್, ಚೀಪ್ ಕಂಜುವೇಟ್ ಆಫೀಸರ್ ನಿಂಗರಾಜ್, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಈ ಕಿರು ಮೃಗಾಲಯವನ್ನು ಸ್ಥಳಾಂತರ ಮಾಡಬೇಡಿ ಎಂದು ಮನವಿ ಪತ್ರ ಸಲ್ಲಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಈಟಿವಿ ಭಾರತ್ ನೊಂದಿಗೆ ಮಾತನಾಡಿದ ವನ್ಯ ಜೀವಿ ಸಂರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷ ಸ್ನೇಕ್ ಸಮೀರ್ ಶೆಟ್ ಸಾಬ್ರಿ, ಸುಮಾರು 15 ಸಾವಿರ ಹಾವುಗಳನ್ನು ಹಿಡಿದು ರಕ್ಷಣೆ ಮಾಡಿ ಅವುಗಳನ್ನು ಈ ಕಿರು ಮೃಗಾಲಯದಲ್ಲಿ ಬಿಟ್ಟು, ಅದರ ಚಲನವಲನ ತಿಳಿದು ನಂತರ ಅರಣ್ಯಕ್ಕೆ ಬಿಟ್ಟಿದ್ದೇನೆ. ಆದರೆ ಈ ಕಿರು ಮೃಗಾಲಯ ಸ್ಥಳಾಂತರಗೊಂಡರೆ ಎಲ್ಲಿ ಹಾವುಗಳನ್ನು ರಕ್ಷಣೆ ಮಾಡಿ ಬಿಡಬೇಕೆಂದು ಪ್ರಶ್ನೆ ಮಾಡಿದರು. ಈ ಕುರಿತು ಕ್ರಮಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಮೃಗಾಲಯದಲ್ಲಿರುವ ಪ್ರಾಣಿ ಪಕ್ಷಿಗಳು
8 ಚಿರತೆಗಳು, 5 ಮೊಸಳೆ, 1 ಕರಡಿ, 45 ಕೃಷ್ಣಮೃಗ, 48 ಜಿಂಕೆ, 20 ಹಾವುಗಳು, 2 ಎಮು, 8 ನವಿಲುಗಳು, 1 ನರಿ, 1 ಕೋತಿ, 50 ನಕ್ಷತ್ರ ಕಲ್ಲು ಮತ್ತು ನೀರಾಮೆ, 4 ಕತ್ತೆ ಕಿರುಬಗಳಿವೆ, ಇವುಗಳಿಗೆ ಪ್ರತಿನಿತ್ಯ 30 ಕೆ.ಜಿ ಮಾಂಸ ಮತ್ತು, ಸಸ್ಯಹಾರಿ ಪ್ರಾಣಿಗಳಿಗೆ ಗೋದಿ, ನವಣೆ, ತರಕಾರಿ, ರಾಗಿ ನೀಡಲಾಗುತ್ತಿದೆ, ಒಟ್ಟು 8 ಜನರ ತಂಡ ಮೃಗಾಲಯವನ್ನು ನೋಡಿಕೊಳ್ಳುತ್ತಾರೆ.