ಕರ್ನಾಟಕ

karnataka

ETV Bharat / state

ಗಣಿನಾಡಲ್ಲಿ ತಂಬಾಕು ನಿಯಂತ್ರಣದ ಕಟ್ಟೆಚ್ಚರ... ವಸೂಲಾದ ದಂಡ, ದಾಖಲಾದ ಪ್ರಕರಣ ಎಷ್ಟು ಗೊತ್ತಾ? - Tobacco Control Coordinator Durgappa Machanoor

ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲಾ ಪೊಲೀಸ್ ಇಲಾಖೆಯು ತಂಬಾಕು ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಸಿದ್ದು, ಸಾವಿರಾರು ಪ್ರಕರಣಗಳನ್ನು ದಾಖಲು ಮಾಡುವ ಮುಖಾಂತರ ಲಕ್ಷಾಂತರ ರೂ. ದಂಡ ಶುಲ್ಕವನ್ನು ವಸೂಲಿ ಮಾಡಿದೆ.

ಬಳ್ಳಾರಿಯಲ್ಲಿ ತಂಬಾಕು ನಿಯಂತ್ರಣದ ಕಟ್ಟೆಚ್ಚರ,  Operation by Bellary District Police for control the Tobacco
ಬಳ್ಳಾರಿಯಲ್ಲಿ ತಂಬಾಕು ನಿಯಂತ್ರಣದ ಕಟ್ಟೆಚ್ಚರ

By

Published : Dec 18, 2019, 5:20 PM IST

ಬಳ್ಳಾರಿ: ಗಣಿನಾಡು ಬಳ್ಳಾರಿ‌ ಜಿಲ್ಲಾದ್ಯಂತ ತಂಬಾಕು ನಿಯಂತ್ರಣದ ಕಟ್ಟೆಚ್ಚರ ಇದೆ.‌ ತಂಬಾಕು ನಿಯಂತ್ರಣ ಕೋಶ ಮಾಡೋ ಕೆಲಸವನ್ನು ಜಿಲ್ಲಾ ಪೊಲೀಸ್ ಇಲಾಖೆ
ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ.‌

ಕಳೆದ ಮೂರ್ನಾಲ್ಕು ವರ್ಷಗಳಿಂದ ಜಿಲ್ಲಾ ಪೊಲೀಸ್ ಇಲಾಖೆಯು ತಂಬಾಕು ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನ ನಡೆಸಿದ್ದು, ಸಾವಿರಾರು ಪ್ರಕರಣಗಳನ್ನು ದಾಖಲು ಮಾಡುವ ಮುಖಾಂತರ ಲಕ್ಷಾಂತರ ರೂ. ದಂಡ ಶುಲ್ಕವನ್ನು ವಸೂಲಿ ಮಾಡಿದೆ.

ಬಳ್ಳಾರಿಯಲ್ಲಿ ತಂಬಾಕು ನಿಯಂತ್ರಣದ ಕಟ್ಟೆಚ್ಚರ

ಈ ಬಗ್ಗೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಂಯೋಜಕ ದುರುಗಪ್ಪ ಮಾಚನೂರು ಮಾಹಿತಿ ನೀಡಿದ್ದಾರೆ. 2017- 18 ನೇ ಸಾಲಿನಲ್ಲಿ ಜಿಲ್ಲೆಯ ಎಂಟು ತಾಲೂಕಿನ ಪೊಲೀಸ್ ಠಾಣೆಗಳಲ್ಲಿ ಅಂದಾಜು 8646 ಪ್ರಕರಣಗಳು ದಾಖಲಾಗಿದ್ದು, ಸುಮಾರು 90,6080 ರೂ.ಗಳ ದಂಡ ಶುಲ್ಕವನ್ನು ವಸೂಲಿ ಮಾಡಲಾಗಿದೆ.

2018-19ನೇ ಸಾಲಿನಲ್ಲಿ ಅಂದಾಜು 5390 ಪ್ರಕರಣಗಳು ದಾಖಲಾಗಿವೆ. ಸುಮಾರು 4,92,000 ರೂ.ಗಳ ದಂಡ ಹಾಗೂ 2019ನೇ ಸಾಲಿನಲ್ಲಿ ಅಂದಾಜು 3370 ಪ್ರಕರಣಗಳು ದಾಖಲಾಗಿದ್ದು, 4,05,800 ರೂ.ಗಳ ದಂಡ ವಸೂಲಿ ಆಗಿದೆ.

For All Latest Updates

ABOUT THE AUTHOR

...view details