ಕರ್ನಾಟಕ

karnataka

ETV Bharat / state

ಇಂದಿನಿಂದ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ದಿನೇ ದಿನೆ ಹೆಚ್ಚಾಗುತ್ತಿರುವ ಕೋವಿಡ್ ಸೋಂಕಿತರಿಗೆ ಬೆಡ್​​ಗಳ ಕೊರತೆ ಆಗಬಾರದೆಂಬ ಉದ್ದೇಶವನ್ನಿಟ್ಟುಕೊಂಡು ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್‌ (ಜೆಐಟಿಓ) ಮತ್ತು ಸೇವಾ ಭಾರತಿ ಸಹಯೋಗದಲ್ಲಿ ಈ ಕೇರ್ ಐಸೋಲೇಷನ್ ಕೇಂದ್ರವನ್ನ ಪ್ರಾರಂಭಿಸಲಾಗಿದೆ.

ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ
ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ

By

Published : May 5, 2021, 10:44 AM IST

ಬಳ್ಳಾರಿ: ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸರ್ಕಾರಿ ಅತಿಥಿ ಗೃಹದಲ್ಲಿ ಅಂದಾಜು 50 ಬೆಡ್​ಗಳ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರಕ್ಕೆ ಇಂದು ಚಾಲನೆ ದೊರೆಯಲಿದೆ.

ವಿಎಸ್​ಕೆ ವಿವಿಯ ಸರ್ಕಾರಿ ಅತಿಥಿ ಗೃಹದಲ್ಲಿರುವ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರದಲ್ಲಿ ಸುಸಜ್ಜಿತ ಬೆಡ್​​ಗಳ ವ್ಯವಸ್ಥೆಯನ್ನ ಮಾಡಲಾಗಿದೆ. ಒಂದೊಂದು ಕೊಠಡಿಗಳಲ್ಲಿ ಎರಡು ಬೆಡ್​​​ಗಳ ವ್ಯವಸ್ಥೆ ಮಾಡಲಾಗಿದೆ. ಕೋವಿಡ್ ಸೋಂಕಿತರು ಹೋಮ್ ಐಸೋಲೇಷನ್​​ನಲ್ಲಿರಲು ಅನಾನುಕೂಲ ಇದ್ದವರಿಗೆ ಮಾತ್ರ ಇಲ್ಲಿ ಇರಲು ಅವಕಾಶವನ್ನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯವು ಕಲ್ಪಿಸಿದೆ.

ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ (ಜಿಐಟಿಒ) ಹಾಗೂ ಸೇವಾ ಭಾರತಿ ಸಹಯೋಗದಲ್ಲಿ ನಡೆಯುವ ಈ ಐಸೋಲೇಷನ್ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಆರೋಗ್ಯಾಧಿಕಾರಿ (ಡಿಹೆಚ್ ಓ) ಡಾ. ಹೆಚ್.ಎಲ್.ಜರ್ನಾಧನ್ ಚಾಲನೆ ನೀಡಲಿದ್ದಾರೆ. ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ, ಮೌಲ್ಯಮಾಪನ ಕುಲಸಚಿವ ಪ್ರೊ. ಶಶಿಕಾಂತ್ ಎಸ್. ಉಡಿಕೇರಿ, ಎಡಿಸಿ ಪಿ.ಎಸ್.ಮಂಜುನಾಥ ಭಾಗವಹಿಸಲಿದ್ದಾರೆ. ಈ ಕೋವಿಡ್ ಕೇರ್ ಐಸೋಲೇಷನ್ ಕೇಂದ್ರಕ್ಕೆ ಬರುವವರು ಹೋಮ್ ಐಸೋಲೇಷನ್​​ನಲ್ಲಿರಲು ಅನಾನುಕೂಲತೆಯನ್ನ ಅನುಭವಿಸುತ್ತಿರುವ ಕೋವಿಡ್ ಜಿಲ್ಲಾಡಳಿತದ ಸೂಕ್ತ ಮಾರ್ಗಸೂಚಿಯ ಮೂಲಕವೇ ಬರಬೇಕು.

ಇದನ್ನೂ ಓದಿ : ಕೊರೊನಾ ಕರ್ಫ್ಯೂ ತಂದಿಟ್ಟ ಸಂಕಷ್ಟ: ಮಲ್ಲಿಗೆ ಹೂ ಹೊಲದಲ್ಲೇ ಬಾಡುವ ಆತಂಕದಲ್ಲಿ ರೈತರು!

ಇಲ್ಲಿ ದಿನದ 24 ಗಂಟೆಯೂ ಕೂಡ ನರ್ಸ್​ಗಳ ಸೌಲಭ್ಯ ಇರುತ್ತೆ. ನುರಿತ ತಜ್ಞ ವೈದ್ಯರ ಸೇವೆಯೂ ಇರುತ್ತೆ. ಇದಲ್ಲದೆ ಯೋಗಾಭ್ಯಾಸ, ಧ್ಯಾನ ಹಾಗೂ ಪ್ರಾಣಾಯಾಮ, ಓದಲು ಪುಸ್ತಕದ ವ್ಯವಸ್ಥೆ ಮಾಡಲಾಗಿದೆ. ವಿಎಸ್​​ಕೆ ವಿವಿಯ ಐಸೋಲೇಷನ್​ನಲ್ಲಿರುವವರಿಗೆ ಪಾಸಿಟಿವ್ ಎನರ್ಜಿ ನೀಡೋ ಮುಖೇನ ಕೋವಿಡ್ ಸೋಂಕಿನಿಂದ ಗುಣಮುಖರಾಗಲು ಸಹಕರಿಸಲಾಗುವುದು ಎಂದು ಕುಲಪತಿ ಪ್ರೊ. ಸಿದ್ದು ಪಿ. ಅಲಗೂರ ತಿಳಿಸಿದ್ದಾರೆ.

ABOUT THE AUTHOR

...view details