ಕರ್ನಾಟಕ

karnataka

ETV Bharat / state

ಹಥ್ರಾಸ್​ ಘಟನೆ ಖಂಡಿಸಿ ಸಾಮಾಜಿಕ ಜಾಲತಾಣಗಳ ಮೂಲಕ​ ಪ್ರತಿಭಟನೆ - ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಪ್ರಕರಣ 2020,

ಹಥ್ರಾಸ್​ನಲ್ಲಿ ನಡೆದ​ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಸಾಮಾಜಿಕ ಜಾಲತಾಣಗಳಲ್ಲಿ​ ಪ್ರತಿಭಟನೆ ಶುರುವಾಗಿದೆ.

Online protest against hathras, Online protest against hathras rape and murder, Online protest against hathras rape and murder in Bellary, hathras rape and murder, hathras rape and murder case, hathras rape and murder case 2020, hathras rape and murder case 2020 news, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಆನ್​ಲೈನ್​ ಪ್ರತಿಭಟನೆ, ಬಳ್ಳಾರಿಯಲ್ಲಿ ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ವಿರುದ್ಧ ಆನ್​ಲೈನ್​ ಪ್ರತಿಭಟನೆ, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಪ್ರಕರಣ, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಪ್ರಕರಣ 2020, ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಪ್ರಕರಣ 2020 ಸುದ್ದಿ,
ಹಥ್ರಾಸ್​ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಆನ್​ಲೈನ್​ ಪ್ರತಿಭಟನೆ

By

Published : Oct 8, 2020, 10:42 AM IST

ಬಳ್ಳಾರಿ: ಹಥ್ರಾಸ್​ನಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಎಐಎಂಎಸ್‍ಎಸ್ ಮತ್ತು ಎಐಡಿಎಸ್‍ಒ ಸಂಘಟನೆಗಳಿಂದ ಸಾಮಾಜಿಕ ಜಾಲತಾಣಗಳ​ ಮೂಲಕ ಪ್ರತಿಭಟನೆ ನಡೆದಿದೆ.

ನೂರಾರು ಸಂಖ್ಯೆಯಲ್ಲಿ ಬಡಾವಣೆಯ ಜನರು-ಮಹಿಳೆಯರು ಸಾಮಾಜಿಕ ಜಾಲತಾಣಗಳ ಮೂಲಕ ಬಳ್ಳಾರಿಯಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ವಿವಿಧ ಬಡಾವಣೆಯ ಜನರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಪ್ರತಿಭಟನೆಗೆ ಸಾಥ್​ ನೀಡಿದರು.

ಎಐಡಿಎಸ್‍ಒನ ಅಖಿಲ ಭಾರತ ಉಪಾಧ್ಯಾಕ್ಷ ಡಾ. ಪ್ರಮೋದ್ ಮಾತನಾಡಿ, ಅತ್ಯಾಚಾರ ಮತ್ತು ಕೊಲೆ ಮಾಡಿದ ನಾಲ್ವರು ಯುವತಿಯ ನಾಲಿಗೆ ಕತ್ತರಿಸಿ, ಬೆನ್ನು ಮೂಳೆ ಮುರಿದಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವು ದಿನಗಳ ಕಾಲ ಜೀವದ ಜೊತೆ ಹೋರಾಡಿ ಉತ್ತರಪ್ರದೇಶದ ಹಥ್ರಾಸ್​ನ ಯುವತಿ ದೆಹಲಿಯ ಸಫ್ದಾರ್​​ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಳು. ಈ ಹೃದಯವಿದ್ರಾವಕ ಘಟನೆಯನ್ನು ಖಂಡಿಸಲು ಯಾವುದೇ ಪದಗಳು ಸಾಲುವುದಿಲ್ಲ. ನಮ್ಮ ದೇಶದಲ್ಲಿ ಮಹಿಳೆಯರ ಶೋಚನೀಯ ಮತ್ತು ವಾಸ್ತವ ಪರಿಸ್ಥಿತಿಯ ಬಗ್ಗೆ ಇಂತಹ ಘಟನೆಗಳು ತೋರಿಸುತ್ತಿವೆ ಎಂದು ಹೇಳಿದರು.

ಎಐಎಂಎಸ್‍ಎಸ್​ನ ಜಿಲ್ಲಾ ಕಾರ್ಯದರ್ಶಿ ಕೆ.ಎಂ.ಈಶ್ವರಿ ಮಾತನಾಡಿ, ಹಲವಾರು ದೊಡ್ಡ ಭಾಷಣಗಳ ಹೊರತಾಗಿಯೂ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಅದೇ ಬಿಜೆಪಿ ನೇತೃತ್ವದ ಯುಪಿ ಸರ್ಕಾರ ಮಹಿಳೆಯರನ್ನು ರಕ್ಷಿಸುವುದರ ಕುರಿತು ಯಾವುದೇ ಕಾಳಜಿ ಹೊಂದಿಲ್ಲದಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ABOUT THE AUTHOR

...view details