ಕರ್ನಾಟಕ

karnataka

By

Published : Jun 10, 2020, 10:50 AM IST

ETV Bharat / state

HPCL ಡೀಲರ್​ಶಿಪ್​ ಕೊಡುವುದಾಗಿ ವಂಚನೆ: ಆನ್‌ಲೈನ್‌ನಲ್ಲಿ ಲಕ್ಷಾಂತರ ರೂ ದೋಖಾ

ಎಚ್‌ಪಿಸಿಎಲ್ ಡೀಲರ್‌ಶೀಪ್ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್ ಪಾನ್‌ಕಾರ್ಡ್, ಆಧಾರ್ ಕಾರ್ಡ್ ಸೇರಿ ಇತರೆ ದಾಖಲೆ ಪಡೆದು, 3.25ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.

fraud
ಆನ್‌ಲೈನ್‌

ಬಳ್ಳಾರಿ:ಎಚ್‌ಪಿಸಿಎಲ್ ಡೀಲರ್‌ಶೀಪ್ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ವ್ಯಕ್ತಿಯೊಬ್ಬರಿಂದ 3.25 ಲಕ್ಷ ರೂ. ವಂಚಿಸಿರುವ ಘಟನೆ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಜಿ.ನಾಗರಾಜ ಎಂಬುವರು ಮೇ.2ರಂದು ಫೇಸ್‌ಬುಕ್‌ ಖಾತೆಯಲ್ಲಿ ಎಚ್‌ಪಿಸಿಎಲ್ ಡೀಲರ್‌ ಶಿಪ್ ಪಡೆಯುವ ಸಂದೇಶದ ಲಿಂಕ್ ಒತ್ತಿದ್ದಾರೆ. ಬಳಿಕ ರಾಜೇಶ ಕುಮಾರ ಗಿರಿ ಎಂಬುವರು ಎಚ್‌ಪಿ ಗ್ಯಾಸ್ ರೀಜನಲ್ ಮ್ಯಾನೇಜರ್ ಎಂದು ಇವರ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಪಾನ್‌ಕಾರ್ಡ್, ಆಧಾರ್ ಕಾರ್ಡ್ ಸೇರಿ ಇತರೆ ದಾಖಲೆ ಪಡೆದಿದ್ದಾರೆ. ಅಲ್ಲದೆ, ನೋಂದಣಿಗೆ 12,500 ರೂ, ಪರವಾನಗಿಗೆ 47,500 ರೂ, ಸ್ಟಾಕ್‌ಗಾಗಿ 1.65ಲಕ್ಷ ರೂ, ಇತರೆ ಒಂದು ಲಕ್ಷ ರೂ. ಕಟ್ಟ ಬೇಕು ಎಂದು ಹೇಳಿ ಹಂತ ಹಂತವಾಗಿ ಆರ್‌ಟಿಜಿಎಸ್ ಮತ್ತು ಆನ್‌ಲೈನ್ ಮೂಲಕ ಹಣ ಪಡೆದು ಮೋಸ ಮಾಡಿದ್ದಾರೆ.

ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details