ಬಳ್ಳಾರಿ : ಕೋವಿಡ್ ಸೋಂಕಿಗೆ ಒಳಗಾಗಿ ಗುಣಮುಖರಾದ ಮಕ್ಕಳಲ್ಲಿ ಮಿಸ್-ಸಿ (MIS-C) ಸೋಂಕು ಹೆಚ್ಚಾಗುತ್ತಿದ್ದು, ವಿಮ್ಸ್ ಆಸ್ಪತ್ರೆಯ ಒಂದು ವರ್ಷದೊಳಗಿನ ಮಗು ಮೃತಪಟ್ಟಿದೆ. ವಿಮ್ಸ್ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದ್ದು, ಮಗುವಿನ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಈ ಕುರಿತು 'ಈಟಿವಿ ಭಾರತ'ನೊಂದಿಗೆ ಮಾತನಾಡಿದ ಬಳ್ಳಾರಿ - ವಿಜಯನಗರ ಜಿಲ್ಲೆಗಳ ಡಿಹೆಚ್ಒ ಡಾ. ಹೆಚ್.ಎಲ್. ಜನಾರ್ಧನ್, ಮಿಸ್- ಸಿ ಹೊಸ ರೂಪದ ಕಾಯಿಲೆಗೆ ಉಭಯ ಜಿಲ್ಲೆಗಳಲ್ಲಿ ಒಂದು ಮಗು ಬಲಿಯಾಗಿದೆ. ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲಿ ಇದುವರೆಗೆ 29 ಮಕ್ಕಳು ಮಿಸ್-ಸಿ ಚಿಕಿತ್ಸೆಗೆಂದು ದಾಖಲಾಗಿದ್ದಾರೆ.