ಬಳ್ಳಾರಿ:ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿಂದು ಹಳೆಯದಾದ ಮನೆಯ ಕಟ್ಟಡ ತೆರವುಗೊಳಿಸುವ ಸಂದರ್ಭ ಅವಶೇಷಗಳಡಿ ಸಿಲುಕಿಕೊಂಡು ಕಾರ್ಮಿಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಹಳೆ ಮನೆ ತೆರವು ವೇಳೆ ಓರ್ವ ಕಾರ್ಮಿಕ ಸಾವು.. - ಕೂಲಿ ಕಾರ್ಮಿಕ ಸಾವು
ಯಶೋದಮ್ಮ ಎಂಬುವರಿಗೆ ಸೇರಿದ್ದ ಈ ಮನೆಯನ್ನ ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯತ್ ಮುಂದಾಗಿತ್ತು. ಕೊಟ್ಟೂರು ಠಾಣೆಯ ಪೊಲೀಸರ ಸಮಕ್ಷಮದಲ್ಲಿ ಮೃತ ವ್ಯಕ್ತಿ ಅಂಜಿನಪ್ಪನವರ ಮೃತದೇಹವನ್ನು ಹೊರ ತೆಗೆಯಲಾಯಿತು.
ಕಾರ್ಮಿಕ ಸಾವು
ಕೊಟ್ಟೂರು ತಾಲೂಕಿನ ಹುಣಸಿಕಟ್ಟೆ ಗ್ರಾಮದ ಅಂಜಿನಪ್ಪ (39) ಎಂಬುವರು ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ.
ಜಿಲ್ಲೆಯ ಕೊಟ್ಟೂರಿನ ಉಜ್ಜನಿ ರಸ್ತೆಯ ಬಳಿ ಈ ಘಟನೆ ನಡೆದಿದೆ. ಯಶೋದಮ್ಮ ಎಂಬುವರಿಗೆ ಸೇರಿದ್ದ ಈ ಮನೆಯನ್ನ ತೆರವುಗೊಳಿಸುವ ಕಾರ್ಯಕ್ಕೆ ಪಟ್ಟಣ ಪಂಚಾಯತ್ ಮುಂದಾಗಿತ್ತು. ಕೊಟ್ಟೂರು ಠಾಣೆಯ ಪೊಲೀಸರ ಸಮಕ್ಷಮದಲ್ಲಿ ಮೃತ ವ್ಯಕ್ತಿ ಅಂಜಿನಪ್ಪನವರ ಮೃತದೇಹವನ್ನು ಹೊರ ತೆಗೆಯಲಾಯಿತು. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.