ಕರ್ನಾಟಕ

karnataka

ETV Bharat / state

600 ಮೆಟ್ಟಿಲು ಹತ್ತಿ ದೇವಿ ಹರಕೆ ತಿರಿಸಿದ.. ಆದರೆ ಮರುಗಳಿಗೆಯಲ್ಲೇ ಸಾವಿನ ಮನೆ ಕದತಟ್ಟಿದ - ಉಚ್ಚಂಗೆಮ್ಮ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಭಕ್ತ ಹೃದಯಾಘಾತದಿಂದ ಸಾವು

600 ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆದು ಬರುವಾಗ ಎದೆನೋವಿನಿಂದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ಕ್ಷೇತ್ರದಲ್ಲಿ ನಡೆದಿದೆ.

devotee died in uchangamma temple
ಉಚ್ಚಂಗೆಮ್ಮ ಕ್ಷೇತ್ರದಲ್ಲಿ ಭಕ್ತ ಸಾವು

By

Published : Oct 21, 2021, 7:42 PM IST

ಹೊಸಪೇಟೆ (ವಿಜಯನಗರ): 600 ಮೆಟ್ಟಿಲು ಹತ್ತಿ ಹರಕೆ ತಿರಿಸಿ ದೇವಿಯ ದರ್ಶನ ಪಡೆದು ಬರುವಾಗ ಹೃದಯಾಘಾತದಿಂದ ಭಕ್ತನೊಬ್ಬ ಮೃತಪಟ್ಟಿರುವ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗೆಮ್ಮ ಕ್ಷೇತ್ರದಲ್ಲಿ ನಡೆದಿದೆ. ಹುಚ್ಚಪ್ಪ (60) ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ. ದಾವಣಗೆರೆ ನಗರದ ನಿವಾಸಿ ಹುಚ್ಚಪ್ಪರವರು ತಮ್ಮ ಪತ್ನಿ ಜೊತೆಗೆ ಉಚ್ಚಂಗೆಮ್ಮನ ದರ್ಶನಕ್ಕೆ ತೆರಳಿದ್ದರು.

ಮೃತ ವ್ಯಕ್ತಿ

ಗುಡ್ಡದ ಮೇಲಿನ ಉಚ್ಚಂಗೆಮ್ಮನ ದರ್ಶನಕ್ಕಾಗಿ 600 ಮೆಟ್ಟಿಲು ಹತ್ತಿದ್ದಾರೆ. ಇದರಿಂದ ಅಸ್ವಸ್ಥಗೊಂಡ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಸ್ಥಳೀಯರು ಡೋಲಿಯಲ್ಲಿ ಕೆಳಗೆ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ, ಮಾರ್ಗ ಮಧ್ಯ ಅಸುನೀಗಿದ್ದಾರೆ.

ABOUT THE AUTHOR

...view details