ಹೊಸಪೇಟೆ(ವಿಜಯನಗರ):ನಾನು ಸತ್ರೂ ಕೊರೊನಾ ವ್ಯಾಕ್ಸಿನ್ ತಗೋಳಲ್ಲ ಎಂದು ಅಜ್ಜಿಯೊಬ್ಬರು ಹಠ ಹಿಡಿದು ಕುಳಿತ ಘಟನೆ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದಲ್ಲಿ ಇಂದು ನಡೆದಿದೆ. ನನಗೆ ಒಂದು ವೇಳೆ ಕೊರೊನಾ ಬಂತೆಂದ್ರೆ ನೀವು ನನ್ನನ್ನು ಆಸ್ಪತ್ರೆಗೆ ಬಂದು ನೋಡಬೇಡಿ. ನಾನು ಯಾವುದೇ ಕಾರಣಕ್ಕೂ ಕೊರೊನಾ ಲಸಿಕೆ ಪಡೆಯಲ್ಲ ಎಂದು ವೃದ್ಧೆಯೋರ್ವರು ಹಠ ಮಾಡಿದ್ದಾರೆ.
ಅದೇ ತಾಂಡದಲ್ಲಿ ಇತ್ತ ಗ್ರಾಪಂ ಸದಸ್ಯರೊಬ್ಬರು ಸ್ನೇಹಿತನಿಗೆ ಲಸಿಕೆ ಹಾಕಿಸು ಎಂದಾಗ, ಸಾವನ್ನು ಯಾರೂ ತಡೆಯೋಕಾಗೋಲ್ಲ. ಸಾಯೋದಿದ್ರೆ ಯಾವತ್ತಾದ್ರೂ ಸಾಯುತ್ತೇವೆ. ನಾನು ಕೋವಿಡ್ ಇಂಜೆಕ್ಷನ್ ಹಾಕಿಸಿಕೊಳ್ಳಲ್ಲ. ಸಣ್ಣ, ಸಣ್ಣ ವಯಸ್ಸಿನ ಹುಡುಗರು ಸತ್ರು. ಅವರನ್ನು ನಾವು ಉಳಿಸಿಕೊಳ್ಳಲು ಸಾಧ್ಯವಾಯಿತಾ ಎಂದು ಪ್ರಶ್ನೆ ಮಾಡಿದ್ದಾರೆ.