ಹೊಸಪೇಟೆ:ತಾಲೂಕಿನ ಮರಿಯಮ್ಮನಹಳ್ಳಿ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.83 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹೊಸಪೇಟೆ: 4.83 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ - HOSPETE RATION RICE FORECLOSURE NEWS
ಹೊಸಪೇಟೆಯ ಮರಿಯಮ್ಮನಹಳ್ಳಿ ಬಳಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 4.83 ಕ್ವಿಂಟಲ್ ಪಡಿತರ ಅಕ್ಕಿಯನ್ನು ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಪಡಿತರ ಅಕ್ಕಿ ಜಪ್ತಿ
ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಚನಾಳ್ ಗ್ರಾಮದ ಕರಿಬಸಪ್ಪ, ಹೊಸಪೇಟೆ ನಗರದ ಕೆ.ದಿನೇಶ್ ಹಾಗೂ ತಾಲೂಕಿನ ಗರಗ ಗ್ರಾಮದ ಶಿವರಾಜ ಬಂಧಿತರು. ದಾಳಿಯ ವೇಳೆ ಮರಿಯಮ್ಮನಹಳ್ಳಿ ಠಾಣೆ ಪಿಎಸ್ಐ ಶಿವಕುಮಾರ್, ಆಹಾರ ಇಲಾಖೆಯ ಶಿರಸ್ತೇದಾರ್ ನಾಗರಾಜ್ ಇದ್ದರು.