ಬಳ್ಳಾರಿ: ಅಬಕಾರಿ ಉಪ ಆಯುಕ್ತರ ಸೂಚನೆ ಮೇರೆಗೆ ನಗರದ ನಲ್ಲಚೆರವು ಪ್ರದೇಶದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮಂಗಳವಾರ ಜಪ್ತಿ ಮಾಡಿದ್ದ ಮದ್ಯ, ಬೀಯರ್, ಕಳ್ಳಭಟ್ಟಿ ಸಾರಾಯಿ ಮತ್ತು ಬೆಲ್ಲದ ಕೊಳೆಯನ್ನು ನಾಶಪಡಿಸಲಾಗಿದೆ.
ಬಳ್ಳಾರಿ: ಜಪ್ತಿ ಮಾಡಿದ ಅಪಾರ ಪ್ರಮಾಣದ ಮದ್ಯ ಹಾಗೂ ಬೆಲ್ಲದ ಕೊಳೆ ನಾಶ ಮಾಡಿದ ಅಧಿಕಾರಿಗಳು - ಬಳ್ಳಾರಿ ಅಕ್ರಮ ಮದ್ಯ ನಾಶ
ಬಳ್ಳಾರಿ ತಾಲೂಕಿನ ವಲಯ 1 ಮತ್ತು 2ರಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ 1,062.675 ಲೀಟರ್ ಮದ್ಯ ಹಾಗೂ 3,942.89 ಲೀಟರ್ ಬೀಯರ್ , 41 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 131 ಲಿಟರ್ ಬೆಲ್ಲದ ಕೊಳೆಯನ್ನು ನಾಶಪಡಿಸಲಾಯಿತು.
![ಬಳ್ಳಾರಿ: ಜಪ್ತಿ ಮಾಡಿದ ಅಪಾರ ಪ್ರಮಾಣದ ಮದ್ಯ ಹಾಗೂ ಬೆಲ್ಲದ ಕೊಳೆ ನಾಶ ಮಾಡಿದ ಅಧಿಕಾರಿಗಳು ಮದ್ಯ](https://etvbharatimages.akamaized.net/etvbharat/prod-images/768-512-04:44:17:1620126857-kn-01-bly-040521-crime-news-ka10007-04052021163529-0405f-1620126329-1065.jpg)
ಮದ್ಯ
ಬಳ್ಳಾರಿ ತಾಲೂಕಿನ ವಲಯ 1 ಮತ್ತು 2ರಲ್ಲಿ ವಿವಿಧ ಪ್ರಕರಣಗಳಲ್ಲಿ ಜಪ್ತಿ ಮಾಡಿದ್ದ 1,062.675 ಲೀಟರ್ ಮದ್ಯ ಹಾಗೂ 3,942.89 ಲೀಟರ್ ಬೀಯರ್, 41 ಲೀಟರ್ ಕಳ್ಳಭಟ್ಟಿ ಸಾರಾಯಿ ಹಾಗೂ 131 ಲಿಟರ್ ಬೆಲ್ಲದ ಕೊಳೆಯನ್ನು ನಾಶಪಡಿಸಲಾಯಿತು.
ಅಬಕಾರಿ ಡಿಸಿಪಿ ಮಹೇಶಕುಮಾರ, ಅಬಕಾರಿ ಉಪ ಅಧೀಕ್ಷಕ ಬಿ.ಎಚ್.ಪೂಜಾರ, ಅಬಕಾರಿ ನಿರೀಕ್ಷಕರಾದ ಜ್ಯೋತಿಬಾಯಿ, ಶಂಕರ ದೊಡ್ಡಮನಿ ಹಾಗೂ ಕೆಎಸ್ಬಿಸಿಎಲ್ ಡಿಪೋ ಮ್ಯಾನೇಜರ್ ಹಾಗೂ ಬಳ್ಳಾರಿ ವಲಯ ನಂಬರ್-1 ಮತ್ತು ನಂಬರ್ 2 ಅಧಿಕಾರಿ ಮತ್ತು ಸಿಬ್ಬಂದಿಯ ಸಮ್ಮುಖದಲ್ಲಿ ನಾಶಪಡಿಸಲಾಗಿದೆ.