ಬಳ್ಳಾರಿ: ಜಿಂದಾಲ್ ಉಕ್ಕು ಕಾರ್ಖಾನೆಗೆ ಅಂದಾಜು 3,666 ಎಕರೆ ಭೂಮಿಯನ್ನು ಪರಾಭಾರೆ ಮಾಡೋದನ್ನು ಸಮರ್ಥನೆ ಮಾಡಿಕೊಳ್ಳೋದು ಬ್ಯಾಡ ಎಂದು ಹಾಲಿ ಕಾಂಗ್ರೆಸ್ ಶಾಸಕ ಬಿ.ಎಸ್.ಆನಂದ್ ಸಿಂಗ್ ಅವರು ವೈದ್ಯಕೀಯ ಶಿಕ್ಷಣ ಸಚಿವ ತುಕಾರಾಂಗೆ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಕುಡಿತಿನಿ ಗ್ರಾಮದ ಆಂಜನೇಯಸ್ವಾಮಿ ದೇಗುಲದ ಬಳಿ ನಿನ್ನೆ ನಡೆದ ಕಾರ್ಖಾನೆಗೆ ಭೂಮಿ ಪರಾಭಾರೆ ಮಾಡುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಅವರು ಮಾತನಾಡಿ, ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ಪರಾಭಾರೆ ಮಾಡಿರೋದು ಕಾನೂನಾತ್ಮಕವಾಗಿಯೇ ಇದೆ ಎಂಬ ಹೇಳಿಕೆಯನ್ನು ಸಚಿವ ಈ.ತುಕಾರಾಂ ನೀಡಿದ್ದಾರೆ.
ಜಿಂದಾಲ್ ಮಾಲೀಕರ ವಿರುದ್ಧ ಮಾತನಾಡದಂತೆ ಬೆದರಿಕೆ ಕರೆ: ಹೆಚ್.ಅನಿಲ್ ಲಾಡ್ ದೂರು
ಹೌದು, ಸ್ವಾಮಿ ನಾವೇನು ಇಲ್ಲ ಅಂತಾ ಹೇಳಿಲ್ಲ. ಆದ್ರೆ, ಭೂಮಿ ಪರಾಭಾರೆ ಬ್ಯಾಡ. ಗುತ್ತಿಗೆ ಆಧಾರದಲ್ಲೇ ಕೊಡಿ ಅಂತಾ ನಾವು ಕೇಳುತ್ತಿದ್ದೇವೆ. ಅದನ್ನ ನೀವು ಸಮರ್ಥನೆ ಮಾಡಿಕೊಳ್ಳೋದು ಬ್ಯಾಡ. ನೀವೊಬ್ಬ ಜವಾಬ್ದಾರಿಯುತ ಸಚಿವರಾಗಿದ್ದೀರಿ. ನೀವು ಈ ರೀತಿಯಾಗಿ ಮಾತನಾಡಬಾರದು ಎಂದು ಪರೋಕ್ಷವಾಗಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜಿಂದಾಲ್ಗೆ ಸ್ವಾಗತ ಮಾಡುವೆ:
ಜಿಂದಾಲ್ ಕಂಪನಿಗೂ ನನಗೂ ಯಾವುದೇ ದ್ವೇಷವಿಲ್ಲ. ನನ್ನ ಹಾಗೂ ಅವರ ನಡುವೆ ಉತ್ತಮ ಬಾಂಧವ್ಯ ಇದೆ. ಜಿಂದಾಲ್ ಕಂಪನಿಯನ್ನ ನಾನು ಸ್ವಾಗತಿಸುವೆ. ನಾನೂ ಕೂಡ ಮಂತ್ರಿಯಾಗಿದ್ದೆ. ಅವರ ಕಂಪನಿಯೊಳಗಡೆ ಸಾಕಷ್ಟು ಕಾರ್ಯಕ್ರಮಗಳನ್ನು ಉದ್ಘಾಟಿಸಿರುವೆ. ಹಾಗಂತ ಜಿಲ್ಲೆಯ ಭೂಮಿಯನ್ನುಅತ್ಯಂತ ಅಗ್ಗದ ದರದಲ್ಲಿ ರಾಜ್ಯ ಸರ್ಕಾರ ಮಾರಾಟ ಮಾಡಲು ಹೊರಟಿರೋದು ತರವಲ್ಲ ಎಂದರು.
ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಮಾತನಾಡಿದ ಶಾಸಕ ಬಿ.ಎಸ್.ಆನಂದ್ ಸಿಂಗ್ ಅದಕ್ಕೆ ನನ್ನ ವಿರೋಧವಿದೆ. ಕಾನೂನಾತ್ಮಕವಾಗಿ ಐದು ಸಾವಿರ ಎಕರೆಯನ್ನಾದ್ರೂ ಕೊಡಿ. ನಾನು ಬ್ಯಾಡ ಅನ್ನಲ್ಲ. ಆದ್ರೆ, ಗುತ್ತಿಗೆ (ಲೀಸ್) ಆಧಾರದ ಮೇಲೆ ಕೊಡಿ. ಅವರಿಗೆ ಒನರ್ಶಿಪ್ ಕೊಡಬ್ಯಾಡಿ ಎಂದು ಕೋರಿದರು.