ಕರ್ನಾಟಕ

karnataka

ETV Bharat / state

ಹಂಪಿ ಉತ್ಸವದಲ್ಲಿ ರೆಡ್‌ ಕಾರ್ಪೆಟ್​ ಸ್ವಾಗತಕ್ಕೆ ಗೋವಿಂದಾನಂದ ಸ್ವಾಮೀಜಿ ಕಿಡಿ..! - ಹಂಪಿ ಉತ್ಸವ

ಜಿಲ್ಲೆಯ ಐತಿಹಾಸಿಕ ಪರಂಪರೆ ಹೊಂದಿರುವ ಹಂಪಿಯಲ್ಲಿ ರೆಡ್‌ ಕಾರ್ಪೆಟ್​​ಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗುತ್ತಿದ್ದು, ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪರಿಚಯಿಸುವಂತಹ ಕಾರ್ಯ ಆಗುತ್ತಿಲ್ಲ ಎಂದು ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಕಿಡಿಕಾರಿದ್ದಾರೆ.

Govindananda swamiji
ಗೋವಿಂದಾನಂದ ಸ್ವಾಮೀಜಿ

By

Published : Jan 11, 2020, 3:11 AM IST

ಬಳ್ಳಾರಿ:ಜಿಲ್ಲೆಯ ಐತಿಹಾಸಿಕ ಪರಂಪರೆ ಹೊಂದಿರುವ ಹಂಪಿಯಲ್ಲಿ ರೆಡ್‌ ಕಾರ್ಪೆಟ್​​ಗೆ ಅದ್ಧೂರಿಯಾಗಿ ಸ್ವಾಗತ ಕೋರಲಾಗುತ್ತಿದ್ದು, ಧಾರ್ಮಿಕ- ಸಾಂಸ್ಕೃತಿಕ ಪರಂಪರೆ ಪರಿಚಯಿಸುವಂತಹ ಕಾರ್ಯ ಆಗುತ್ತಿಲ್ಲ ಎಂದು ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಕಿಡಿಕಾರಿದ್ದಾರೆ.

ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೋವಿಂದಾನಂದ ಸ್ವಾಮೀಜಿ

ಹಂಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಅರೆ- ಬರೆ ಬಟ್ಟೆ ಧರಿಸುವವರಿಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ಹಂಪಿ ಉತ್ಸವವನ್ನು ಪುರಾಣ, ಪ್ರವಚನ ಕಾರ್ಯಕ್ರಮವಾಗಿ ಆಯೋಜಿಸಲು ಜಿಲ್ಲಾಡಳಿತ ಈವರೆಗೂ ಮುಂದಾಗಿಲ್ಲ.‌ ಈ ಕುರಿತು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನ ಭೇಟಿಯಾಗಿ ಈ ಕುರಿತು ಅವರ ಗಮನ ಸೆಳೆಯುವುದಾಗಿ ತಿಳಿಸಿದರು.

ವಿದೇಶದಿಂದಲೂ ಬಂದು ಅರೆ-ಬರೆ ಬಟ್ಟೆ ಧರಿಸಿದವರಿಗೆ ರೆಡ್‌ ಕಾರ್ಪೆಟ್ ಸ್ವಾಗತ ಕೋರಲಾಗುತ್ತಿದೆ. ಆದರೆ, ಪುರಾಣ, ಪ್ರವಚನದಂತ ಕಾರ್ಯಕ್ರಮಗಳಿಗೆ ಹಂಪಿಯಲ್ಲಿ ಜಿಲ್ಲಾಡಳಿತ ಅವಕಾಶ ನೀಡುತ್ತಿಲ್ಲ. ಹಂಪಿ ಎದುರು ಬಸವಣ್ಣ ದೇವಾಲಯ ಬಳಿ ಪ್ರಸಾದ ವ್ಯವಸ್ಥೆ ಮಾಡಲು ಸಹಕಾರ ನೀಡುತ್ತಿಲ್ಲ. ಅರೆ- ಬರೆ ಬಟ್ಟೆ ಹಾಕಿದವರಿಗೆ ವೇದಿಕೆಯ ಮೇಲೆ ಅವಕಾಶವಿದೆ. ಸಾಧು- ಸಂತರಿಗೆ, ಗುರುಕುಲದ ವಿದ್ಯಾರ್ಥಿಗಳಿಗೆ ಒಂಚೂರು ಬೆಲೆ ಸಿಗುತ್ತಿಲ್ಲ. ಇವರೆಲ್ಲ ಹಂಪಿ ಉತ್ಸವದ ಆಸೆಯವನ್ನು ಹಾಳು ಮಾಡುತ್ತಿದ್ದಾರೆ. ಇದರಿಂದ ಯಾವ ಪ್ರಯೋಜನವಾಗಿಲ್ಲ. ಇಷ್ಟು ವರ್ಷ ಹಂಪಿ ಉತ್ಸವ ಹೆಸರಿನಲ್ಲಿ ಏನೇನು ಅಭಿವೃದ್ಧಿ ಮಾಡಿದ್ದಾರೆ ತೋರಿಸಲಿ. ಉತ್ಸವದ ಬಗ್ಗೆ ಸಮರ್ಪಕ‌ ಮಾಹಿತಿಯೂ ಇಲ್ಲ ಆಹ್ವಾನವಿಲ್ಲ. ಈ ಕುರಿತು ಜಿಲ್ಲಾಧಿಕಾರಿ, ಸಂಸದ, ಸಚಿವರಿಗೂ ಮಾಹಿತಿ ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ABOUT THE AUTHOR

...view details