ಹೊಸಪೇಟೆ: ಬಳ್ಳಾರಿಯ ಕಂಪ್ಲಿ ಐತಿಹಾಸಿಕ ಸೋಮಪ್ಪನ ಕೆರೆ ಅಭಿವೃದ್ಧಿ ಕಾರ್ಯಕ್ಕೆ ಗರ ಬಡೆದಿದೆ. 2018ರಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿತ್ತು. ಆದರೆ, ಎರಡು ವರ್ಷ ಕಳೆದರೂ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿಲ್ಲ.
ಕೆರೆಯ ದಂಡೆಯ ಭಾಗದಲ್ಲಿ ಕಲ್ಲುಗಳನ್ನು ಮಾತ್ರ ಜೋಡಿಸಲಾಗಿದೆ. ಅಲ್ಲದೇ ಕೆರೆಯ ಹೃದಯ ಭಾಗದಲ್ಲಿ ಎತ್ತರದಲ್ಲಿ ಕಲ್ಲುಗಳನ್ನು ನಿರ್ಮಿಸಲಾಗಿದೆ. ಈಗ ಕೆರೆಯ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ.
ಡಿಎಸ್ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ.. ಸುಮಾರು 48 ಎಕೆರೆ ವಿಸ್ತೀರ್ಣ ಕೆರೆ ಹೊಂದಿದೆ. ಈ ಮುಂಚೆ ಕೃಷಿಗೆ ನೀರನ್ನು ಬಳಕೆ ಮಾಡಲಾಗುತಿತ್ತು. ಆದರೆ, ಈಗ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ಕ್ರೀಯಾಯೋಜನೆ ಮಾಡುವ ಮೂಲಕ ಎಂಟು ಕೋಟಿ ರೂ.ಅನುದಾನವನ್ನು ಮೀಸಡಲಾಗಿತ್ತು.
ಕ್ರೀಯಾ ಯೋಜನೆಯಲ್ಲಿ ಏನಿದೇ?:ವಾಯು ವಿವಾಹರಕ್ಕೆ ಬರಲು ಕಾಲು ದಾರಿ, ಉದ್ಯಾನವನ, ಸೋಮನಾಥ ಮೂರ್ತಿಯನ್ನು ಪ್ರತಿಷ್ಠಾಪಿಸುವುದು ಹಾಗೂ ಬೋಟ್ ವ್ಯವಸ್ಥೆ ಕಲ್ಪಿಸುವುದು ಕ್ರೀಯಾ ಯೋಜನೆಯಲ್ಲಿತ್ತು. ಆದರೆ, ಈಗ ಕೆರೆಯ ಸುತ್ತಲು ಕಲ್ಲುಗಳನ್ನು ಮಾತ್ರ ಜೋಡಿಸಲಾಗಿದೆ. ಉಳಿದ ಬಾಕಿ ಕೆಲಸಗಳು ನನೆಗುದಿಗೆ ಬಿದ್ದಿದೆ.
ಕೆರೆ ಗಿಡಗಂಟೆಗಳ ತಾಣ :ಕೆರೆಯಲ್ಲಿ ಯಥೇಚ್ಛವಾಗಿ ಮುಳ್ಳು ಗಂಟಿಗಳು ಬೆಳೆದಿವೆ. ಪುರಾತನ ಕೆರೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಗಿಡ-ಗಂಟಿಗಳನ್ನು ತೆರವು ಗೊಳಿಸುವಂತ ಕಾರ್ಯಗಳು ಯಾವುದೇ ಕಾರ್ಯಗಳು ನಡೆಯುತ್ತಿಲ್ಲ.
ಅಭಿವೃದ್ಧಿಗೆ ಇಚ್ಛಾಶಕ್ತಿ ಕೊರತೆ :ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ಕೈತೊಳೆದು ಕೊಳ್ಳಲಾಗಿದೆ. ನಿಗದಿ ಸಮಯದಲ್ಲಿ ಅಭಿವೃದ್ಧಿ ಪೂರ್ಣಗೊಳ್ಳುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿ ಕೊರತೆ ಎಂಬ ಆರೋಪಗಳು ಬಲವಾಗಿ ಕೇಳಿ ಬರುತ್ತಿವೆ.
ಅಭಿವೃದ್ಧಿ ಕಾರ್ಯಗಳಿಗೆ ವೆಚ್ಚ ಜಾಸ್ತಿ:ನಿಗದಿತ ಸಮಯದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಬೇಕಾಗುತ್ತದೆ. ಇಲ್ಲದಿದ್ದರೇ ವೆಚ್ಚ ಜಾಸ್ತಿ ಆಗುವ ಸಂಭವವಿರುತ್ತದೆ. ಮತ್ತೆ ಅನುದಾನಕ್ಕಾಗಿ ಕಾಯುವಂತ ಸ್ಥಿತಿ ಎದುರಾಗುತ್ತದೆ.
ಈಟಿವಿ ಭಾರತ್ನೊಂದಿಗೆ ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಉಪಾಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಅವರು ಮಾತನಾಡಿ, ವಿಜಯನಗರ ಸಾಮ್ರಾಜ್ಯಕ್ಕಿಂತ ಮುಂಚೆ ಕೆರೆಯನ್ನು ನಿರ್ಮಿಸಲಾಗಿದೆ. ಗುಂಡುಗಲಿ ಕುಮಾರರಾಮ ಕಾಲದಲ್ಲಿ ಕೆರೆ ನಿರ್ಮಾಣಗೊಂಡಿದೆ.
ಎರಡು ವರ್ಷದ ಹಿಂದೆ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿತ್ತು. ಅಲ್ಲದೇ, 8.50 ಕೋಟಿ ರೂ.ಅನುದಾನವನ್ನು ಮೀಸಡಲಾಗಿತ್ತು. ಸಂಪೂರ್ಣ ಪ್ರವಾಸಿ ತಾಣವನ್ನಾಗಿ ಮಾಡುವುದು. ಅಲ್ಲದೇ, ಮಳೆ ನೀರನ್ನು ಸಂಸ್ಕರಿಸಿ ಉಪಯೋಗಿಸುವ ಕಾರ್ಯ ಮಾಡುವ ಉದ್ದೇಶವನ್ನು ಹೊಂದಲಾಗಿತ್ತು.
ಚರಂಡಿ ನೀರು ಕೆರೆ ಸೇರಬಾರದು ಎಂಬ ಅಂಶ ಅಭಿವೃದ್ಧಿ ಕಾರ್ಯದಲ್ಲಿತ್ತು. ರಾಜಕೀಯ ಇಚ್ಛಾಶಕ್ತಿ ಕೊರೆತೆಯೋ ಅಥವಾ ಗುತ್ತಿಗೆದಾರನ ವೈಫಲ್ಯವೋ ಎಂಬುದು ತಿಳಿಯ ಬೇಕಾಗಿದೆ ಎಂದು ಹೇಳಿದರು.