ಬಳ್ಳಾರಿ:ಸರ್ಕಾರಿ ಮತ್ತು ಖಾಸಗಿ ಶಾಲಾ, ಕಾಲೇಜು ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿನ ಗೋಡೆಗಳ ಮೇಲೆ ಕಿಡಿಗೇಡಿಗಳು No NRC, NPR, CAA ಎನ್ನುವ ಬರಹಗಳನ್ನು ಬರೆದಿದ್ದಾರೆ.
ಈ ರೀತಿಯ ಬರಹಗಳನ್ನು ಎಲ್ಲೆಲ್ಲಿ ಬರೆಯಲಾಗಿದೆ?
ಬಳ್ಳಾರಿ:ಸರ್ಕಾರಿ ಮತ್ತು ಖಾಸಗಿ ಶಾಲಾ, ಕಾಲೇಜು ಸೇರಿದಂತೆ ಸಾರ್ವಜನಿಕರ ಸ್ಥಳಗಳಲ್ಲಿನ ಗೋಡೆಗಳ ಮೇಲೆ ಕಿಡಿಗೇಡಿಗಳು No NRC, NPR, CAA ಎನ್ನುವ ಬರಹಗಳನ್ನು ಬರೆದಿದ್ದಾರೆ.
ಈ ರೀತಿಯ ಬರಹಗಳನ್ನು ಎಲ್ಲೆಲ್ಲಿ ಬರೆಯಲಾಗಿದೆ?
* ನಗರದಲ್ಲಿ ಫೆಬ್ರವರಿ 26ರಂದು ಸುಧಾ ಕ್ರಾಸ್ ಹತ್ತಿರದ ಗಾಂಧಿ ಪ್ರತಿಮೆಯ ಕಾಂಪೌಂಡ್ ಮೇಲೆ #BOYCOTT NRC, NPR, CAA ಎನ್ನುವ ಬರಹವಿದೆ.
* ಗ್ರಾಮಾಂತರ ಪ್ರದೇಶದ ರೇಡಿಯೋ ಪಾರ್ಕ್ ನಗರದ ಮಹಾನಗರ ಪಾಲಿಕೆ ಆಯುಕ್ತೆಯ ವಸತಿ ಗೃಹದ ಪಕ್ಕದಲ್ಲಿನ ಪಾರ್ಕ್ ಗೋಡೆಯ ಮೇಲೆ NO NRC,NPR, CAA ಬರಹ ಬರೆದಿದ್ದಾರೆ.
ಸರ್ಕಾರಿ ಐ.ಟಿ.ಐ ಕಾಲೇಜ್ ಗೋಡೆ ಮೇಲೆ, ಇನ್ನಿತರೆ ಗೋಡೆಗಳ ಮೇಲೆ ಇಂತಹ ವಾಕ್ಯಗಳನ್ನು ಬರೆದು ಎಡ ಮತ್ತು ಬಲಪಂಥೀಯ ವ್ಯಕ್ತಿಗಳ ನಡುವೆ ಗದ್ದಲ, ಗಲಾಟೆ ಮಾಡಿಸುವ, ಕೋಮುಗಳ ನಡುವೆ ಜಗಳ ಮಾಡಿಸಲು ಈ ರೀತಿಯ ಬರಹಗಳನ್ನು ಕಿಡಿಗೇಡಿಗಳು ಬರೆಯುತ್ತಿದ್ದಾರೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.