ಹೊಸಪೇಟೆ:ಸಚಿವ ಆನಂದ ಸಿಂಗ್ ಅವರಿಗೆ ಯಾವುದೇ ಅಸಮಾಧಾನವಿಲ್ಲ. ಮಂತ್ರಿ ಸ್ಥಾನವನ್ನು ಅವರು ಬೇಡ ಅಂದಿದ್ದರು. ಆದರೂ ಸಹ ಯಡಿಯೂರಪ್ಪ ಅವರನ್ನು ಮಂತ್ರಿ ಮಾಡಿದ್ದರು ಎಂದು ಸುರಪುರ ಶಾಸಕ ರಾಜುಗೌಡ ಹೇಳಿದರು.
ಸಚಿವ ಆನಂದ ಸಿಂಗ್ ಖಾತೆ ಬದಲಾವಣೆ ಬೇಡ: ಶಾಸಕ ರಾಜುಗೌಡ - Hosapete news
ಆನಂದ್ ಸಿಂಗ್ ಅವರು ಅರಣ್ಯ ಇಲಾಖೆ ಸಚಿವರಾಗಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಸಿಎಂ ಈಗ ಅವರ ಖಾತೆ ಬದಲಾವಣೆ ಮಾಡಬಾರದು ಎಂದು ಸುರಪುರ ಶಾಸಕ ರಾಜುಗೌಡ ಮನವಿ ಮಾಡಿದ್ದಾರೆ.
ಆನಂದ ಸಿಂಗ್ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಖಾತೆ ಬದಲಾವಣೆ ಮಾಡಿದರೂ ಸಹ ಆನಂದ ಸಿಂಗ್ ಅವರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ. ಮೊದಲು ಅಸಮಾಧಾನಿತರಿಗೆ ಸಚಿವ ಸ್ಥಾನ ನೀಡಲಿ ಎಂದು ಆನಂದ ಸಿಂಗ್ ಹೇಳಿದ್ದಾರೆ ಎಂದರು.
ಆನಂದ ಸಿಂಗ್ ಒಳ್ಳೆಯ ಮನುಷ್ಯ. ಅರಣ್ಯ ಇಲಾಖೆಯಲ್ಲಿದ್ದಾಗ ಉತ್ತಮ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳು ಈಗ ಅವರ ಖಾತೆ ಬದಲಾವಣೆ ಮಾಡಬಾರದು ಎಂಬುದು ನನ್ನ ಮನವಿ. ಬಿಜೆಪಿಯಲ್ಲಿ ಎಲ್ಲವೂ ಸರಿ ಇದೆ. ಮನುಷ್ಯ ಅಂದ ಮೇಲೆ ನೆಗಡಿ, ಕೆಮ್ಮು ಇರುತ್ತದೆ ಅದನ್ನು ಸರಿಪಡಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.