ಕರ್ನಾಟಕ

karnataka

ETV Bharat / state

ಮತದಾನ ಬಹಿಷ್ಕರಿಸಿದ್ರೂ ಈ ಗ್ರಾಮಕ್ಕಿಲ್ಲ ಶಾಶ್ವತ ಕುಡಿಯುವ ನೀರು ಪೂರೈಕೆ!

ಬಳ್ಳಾರಿ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ತಾಲೂಕಿನ ಹರಗಿನಡೋಣಿ ಗ್ರಾಮದ ಜನ ಇನ್ನೂ ಕೂಡ ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ.

ಕುಡಿಯುವ ನೀರು ಪೂರೈಕೆ

By

Published : Mar 19, 2019, 4:57 PM IST

ಬಳ್ಳಾರಿ: ದಶಕದಿಂದಲೂ ಆ ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರವಿದೆಯಾದ್ರೂ, ಈವರೆಗೂ ಶಾಶ್ವತ ಕುಡಿಯುವ ನೀರು ಪೂರೈಕೆಗೆ ಜಿಲ್ಲಾಡಳಿತ ಅಥವಾ ಜನಪ್ರತಿನಿಧಿಗಳು ಚಿಂತನೆಯನ್ನೇ ನಡೆಸಿಲ್ಲ.

ಈ ಹಿಂದೆ ನಡೆದಿದ್ದ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಆ ಗ್ರಾಮದ ಮತದಾರರು ಮತದಾನ ಬಹಿಷ್ಕರಿಸಿ ತಮಗೆ ಮೂಲಸೌಲಭ್ಯ ಕಲ್ಪಿಸಿಕೊಡಿ ಎಂದು ಆಗ್ರಹಿಸಿದ್ದರು. ಆದರೆ ಮತ್ತೊಂದು ಚುನಾವಣೆ ಬಂದರೂ ಈ ಗ್ರಾಮಸ್ಥರಿಗೆ ಕುಡಿಯುವ ನೀರಿನ ಬವಣೆ ಜೀವಂತವಾಗಿದೆ.

ಕುಡಿಯುವ ನೀರು ಪೂರೈಕೆ

ಹೌದು, ಬಳ್ಳಾರಿ ತಾಲೂಕಿನ ಹರಗಿನಡೋಣಿ ಗ್ರಾಮಸ್ಥರು ಶಾಶ್ವತ ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಕಳೆದ ಉಪಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವ ಮುಖೇನ ಜನಪ್ರತಿನಿಧಿಗಳಿಗೆ ತಕ್ಕಪಾಠ ಕಲಿಸಿದ್ದ ಗ್ರಾಮಸ್ಥರು ಇದೀಗ ಲೋಕಸಭಾ ಸಾರ್ವತ್ರಿಕ ಚುನಾವಣೆ ಎದುರಾಗಿದೆಯಾದ್ರೂ, ಟ್ಯಾಂಕರ್ ಮೂಲಕವೇ ಈವರೆಗೂ ಕುಡಿಯುವ ನೀರು ಪೂರೈಕೆಸಲಾಗುತ್ತದೆ. ಈ ಬಾರಿಯ ಚುನಾವಣೆಯಲ್ಲಿ ಗ್ರಾಮಸ್ಥರ ನಿಲುವು ಏನಿದೆ ಎಂಬುದನ್ನು ಕಾದು ನೋಡಬೇಕಿದೆ.

ರೈತನ ಬೋರ್​ವೆಲ್ ಆಸರೆ:

ಗ್ರಾಮದ ಹೊರ ವಲಯದ ಪ್ರಕಾಶಪ್ಪ ಎಂಬುವರ ಜಮೀನಿನಲ್ಲಿರುವ ಬೋರ್​ವೆಲ್​ ಈ ಗ್ರಾಮದ ಜನರಿಗೆ ಕುಡಿಯುವ ನೀರು ಪೂರೈಕೆಗೆ ಆಸರೆಯಾಗಿದೆ. ಸತತ ಎಂಟು ತಿಂಗಳಿಂದಲೂ ಗ್ರಾಮಕ್ಕೆ ಕರ್ನಾಟಕ ಗ್ರಾಮೀಣ ಮತ್ತು ನಗರ ನೀರು ಪೂರೈಕೆ ಇಲಾಖೆಯ ವಾಹನವು ಸೇರಿದಂತೆ ಸುಮಾರು ನಾಲ್ಕು ವಾಹನಗಳು ದಿನಾಲೂ ನೀರು ಪೂರೈಸುತ್ತಿವೆ. ಬೆಳಗ್ಗೆ 10 ಗಂಟೆಗೆ ನೀರು ಪೂರೈಕೆ ಕಾರ್ಯಾರಂಭ ಮಾಡಿದರೆ, ಸಂಜೆ ಐದಾರು ಗಂಟೆಯವರೆಗೂ ನೀರು ಪೂರೈಸಲಾಗುತ್ತದೆ. ಈ ವೇಳೆ ನಾಮುಂದು ತಾಮುಂದು ಎಂಬಂತೆ ಜನರು ಟ್ಯಾಂಕರ್​ಗಳಿಗೆ ಮುಗಿಬೀಳುವ ದೃಶ್ಯ ಕಂಡುಬರುತ್ತಿದೆ.

ABOUT THE AUTHOR

...view details