ಕರ್ನಾಟಕ

karnataka

By

Published : Jan 17, 2020, 1:31 PM IST

ETV Bharat / state

ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ: ರೈತಸಂಘ ಆರೋಪ

ಬಳ್ಳಾರಿ ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್​ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ ಎಂದು ಜಿಲ್ಲಾ ತುಂಗಭದ್ರಾ ರೈತ ಸಂಘ ಆರೋಪಿಸಿದೆ.

no-benefit-to-farmers-from-paddy-buying-centers-tungabhadra-farmers-union-alleges
ಜಿ.ಪುರುಷೋತ್ತಮಗೌಡ

ಬಳ್ಳಾರಿ:ಜಿಲ್ಲೆಯ ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಿಂದ ರೈತರಿಗೆ ಯಾವುದೇ ಪ್ರಯೋಜವಿಲ್ಲ ಎಂದು ಜಿಲ್ಲಾ ತುಂಗಭದ್ರಾ ರೈತ ಸಂಘ ಆರೋಪಿಸಿದೆ.

ಬಳ್ಳಾರಿಯ ಮಯೂರ ಹೊಟೇಲ್​ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮಾತನಾಡಿ, ಭತ್ತ ಖರೀದಿ ಕೇಂದ್ರಗಳಲ್ಲಿನ ನಿಯಮಗಳ ಸಡಿಲಿಕೆಯಾಗಬೇಕು. ಇಲ್ಲಿ ಕೇವಲ 40 ಕ್ವಿಂಟಾಲ್ ಭತ್ತವನ್ನು ಮಾತ್ರ ಖರೀದಿಸಲಾಗುತ್ತೆ. ಹಾಗೂ ಒಣ ಭತ್ತವನ್ನ ಖರೀದಿಸಲಾಗುತ್ತಿದೆ. ಚೀಲವನ್ನು ನಾವೇ ಕೊಡಬೇಕು. ಆದರೆ, ಅಗತ್ಯ ಬೆಂಬಲ ನೀಡಿ ಖರೀದಿಸಲಾಗುತ್ತಿಲ್ಲ. ಜಿಎಸ್ ಟಿ ತೆರಿಗೆಯನ್ನ ವಿಧಿಸಲಾಗುತ್ತೆ. ಇದೆಲ್ಲವನ್ನೂ ನೋಡಿದ್ರೆ ರೈತರ‌ ಮೇಲೆ ಆರ್ಥಿಕವಾಗಿ ಹೆಚ್ಚಿನ ಹೊರೆಯಾಗುತ್ತೆ ಎಂದರು.

ಜಿ.ಪುರುಷೋತ್ತಮಗೌಡ

ಜಿಲ್ಲೆಯ ನಾನಾ ತಾಲೂಕಿನ ಎಪಿಎಂಸಿ ಯಾರ್ಡ್​ಗಳಲ್ಲಿ ತೆರೆಯಲಾಗಿದ್ದ ಭತ್ತ ಖರೀದಿ ಕೇಂದ್ರಗಳಲ್ಲಿ ನಿಯಮಗಳನ್ನ ಸಡಿಲಿಕೆ ಮಾಡಬೇಕು. ನೆರೆಯ ಆಂಧ್ರಪ್ರದೇಶ ರಾಜ್ಯದಲ್ಲಿ ಭತ್ತ ಖರೀದಿಗೆ ಮುಕ್ತ ಅವಕಾಶ ನೀಡಲಾಗಿದೆ.‌ ಜಿಎಸ್ ಟಿ ತೆರಿಗೆಯನ್ನು ರದ್ದುಪಡಿಸಲಾಗಿದೆ. ಖರೀದಿಗೆ ಯಾವ ರೀತಿಯ ವಿನಾಯಿತಿ ವಿಧಿಸಿಲ್ಲ. ಅದೇ ಮಾದರಿಯನ್ನು ಕರ್ನಾಟಕದಲ್ಲಿ ಅನುಸರಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು 7 ತಿಂಗಳಾದ್ರೂ ತುಂಗಭದ್ರಾ ಜಲಾಶಯದ ಹೂಳೆತ್ತಲು ಸೂಕ್ತ ಕ್ರಮ ಕೈಗೊಂಡಿಲ್ಲ. ಮಾರ್ಚ್ ತಿಂಗಳಲ್ಲಿ ಮಂಡಿಸುವ ಬಜೆಟ್ ನಲ್ಲಿ ಅಂದಾಜು ಸಾವಿರ ಕೋಟಿ ರೂ. ಗಳನ್ನ ಮೀಸಲಿರಿಸಬೇಕೆಂದು ಒತ್ತಾಯಿಸಿದರು.

ABOUT THE AUTHOR

...view details