ಹೊಸಪೇಟೆ: ವಿಜಯ ನಗರ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ವಿಜಯನಗರ ಸಾಮ್ರಾಜ್ಯದ ಮಾದರಿಯಲ್ಲಿ ನಿರ್ಮಾಣವಾಗಲಿದೆ. ಈಗಾಗಲೇ ಈ ಕುರಿತು ನೀಲನಕ್ಷೆ ತಯಾರಿಸಲಾಗುತ್ತಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.
ನಗರದ ಟಿಎಸ್ಪಿಯು (ತುಂಗಭದ್ರಾ ಸ್ಟೀಲ್ ಪ್ರಾಡೆಕ್ಟ್ ಲಿಮಿಟೆಡ್) ಕರ್ನಾಟಕ ಗೃಹ ಮಂಡಳಿಗೆ 82 ಎಕರೆ ಭೂಮಿಯನ್ನು ಪರಾಭಾರೆ ಮಾಡಿತ್ತು. ಈಗ ಕಂದಾಯ ವ್ಯಾಪ್ತಿಗೆ ಒಳಪಡುತ್ತಿದೆ. ಈ ಸ್ಥಳದಲ್ಲಿ ನೂತನ ಜಿಲ್ಲೆಯ ಕಚೇರಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ವಿಜಯನಗರ ಕಾಲದ ಪರಂಪರೆ ಅಚ್ಚಳಿಯದೆ ಉಳಿಸುವ ಕಾರ್ಯವಾಗಲಿದೆ. ಅಲ್ಲದೆ 82 ಎಕೆರೆಯಲ್ಲಿ ಜಿಲ್ಲಾಡಳಿತ ಕಚೇರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತ್ ಕಚೇರಿ, ಮೆಡಿಕಲ್ ಕಾಲೇಜ್, ಆಸ್ಪತ್ರೆ ನಿರ್ಮಿಸುವ ಉದ್ದೇಶವನ್ನು ಹೊಂದಲಾಗಿದೆ.
ಅನುದಾನದ ಕೊರತೆಯಿಲ್ಲ:
ಕೆಎಂಇಆರ್ಸಿ ಅನುದಾನ 17 ಸಾವಿರ ಕೋಟಿ ರೂ. ಇದೆ. ಗಣಿಗಾರಿಕೆಯ ಪ್ರದೇಶಗಳನ್ನು ಅಭಿವೃದ್ಧಿ ಮಾಡಲು ಅನುದಾನ ನಿಗದಿ ಮಾಡಲಾಗಿದೆ. ಅದಕ್ಕೆ ಬಡ್ಡಿ 3 ಸಾವಿರ ಕೋಟಿಯಷ್ಟು ಬೆಳೆದಿದೆ. ಈ ಹಣವನ್ನು ಉಪಯೋಗಿಸಲು ಉದ್ದೇಶಿಸಲಾಗಿದೆ.