ಬಳ್ಳಾರಿ: ಮೊಹರಂ ಹಬ್ಬದ ಪ್ರಯುಕ್ತ ತಾಲೂಕಿನ ಗಡಿಭಾಗಕ್ಕೆ ಹೊಂದಿಕೊಂಡಿರುವ ಮೋಕಾ ಹೋಬಳಿ ವ್ಯಾಪ್ತಿಯ ಜಾಲಿಹಾಳು ಗ್ರಾಮದಲ್ಲಿಂದು ನೂತನ ಹೊನ್ನೂರ ಸ್ವಾಮಿ ದೇಗುಲ ತಲೆಎತ್ತಿದೆ.
ತಾಲೂಕಿನ ಜಾಲಿಹಾಳು ಗ್ರಾಮದ ಲಿಂಗಾಯತ ಸಮುದಾಯದ ಹತ್ತಾರು ಮಂದಿ ಭಕ್ತರು ನೀಡಿದ ಅಂದಾಜು 30 ಲಕ್ಷ ರೂ.ಗಳ ದೇಣಿಗೆ ಸಹಯೋಗದಲ್ಲಿ ಈ ದೇಗುಲ ನಿರ್ಮಾಣ ಮಾಡಲಾಗಿದೆ. ಈ ದಿನದಂದು ತಾಲೂಕಿನ ಹೆಬ್ಬಾಳು ಬೃಹನ್ಮಠದ ಷ.ಬ್ರ. ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಈ ನೂತನ ದೇಗುಲಕ್ಕೆ ಚಾಲನೆ ನೀಡಿದರು.
ನೂತನ ದೇಗುಲಕ್ಕೆ ಚಾಲನೆ ನೀಡಿದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಜಾಲಿಹಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಹೊನ್ನೂರಸ್ವಾಮಿ ದೇಗುಲಕ್ಕೆ ಚಾಲನೆ ನೀಡೋ ಮುಖೇನ ಈ ಬಾರಿ ಮೊಹರಂ ಸಂಭ್ರಮಕ್ಕೆ ಬಹಳ ಅರ್ಥಪೂರ್ಣವಾಗಿ ಮುನ್ನುಡಿ ಬರೆದಿದ್ದಾರೆ.
ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ನೂತನ ಹೊನ್ನೂರಸ್ವಾಮಿ ದೇಗುಲಕ್ಕೆ ಚಾಲನೆ ನೀಡಿದ ನಂತರ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಮೊಹರಂ ಹಬ್ಬ ಮುಸ್ಲಿಂ ಧರ್ಮೀಯರ ಹಬ್ಬವಾದರೂ, ಹಿಂದೂಗಳೇ ಹೆಚ್ಚಾಗಿ ಆಚರಿಸುತ್ತಾರೆ. ಇದರಿಂದ ಈ ನಾಡಿನಲ್ಲಿ ಹಿಂದೂ-ಮುಸ್ಲಿಂ ಧರ್ಮೀಯರ ಭಾವೈಕ್ಯತೆ ಇನ್ನೂ ಹೆಚ್ಚುತ್ತಿದೆ ಎಂದರು.
ಓದಿ:ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ: ಹುಬ್ಬಳ್ಳಿ ಹುಡುಗನ ಅತ್ಯುತ್ತಮ ಸಾಧನೆ