ಕರ್ನಾಟಕ

karnataka

ETV Bharat / state

3 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಮಾರುಕಟ್ಟೆ: ಮಳೆ ಬಂದ್ರೆ ಅಧ್ವಾನ - New market construction in Ballary

ಬಳ್ಳಾರಿ ಮಹಾನಗರ ಪಾಲಿಕೆ ವತಿಯಿಂದ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮಾರುಕಟ್ಟೆಯ ಮುಂಭಾಗ ಮಳೆ ನೀರು ನಿಂತು ಸಾರ್ವಜನಿಕರ ಓಡಾಟಕ್ಕೆ ಕಸಿವಿಸಿ ಉಂಟುಮಾಡಿದೆ.

APMC Market
ತರಕಾರಿ ಮಾರುಕಟ್ಟೆ

By

Published : Nov 7, 2020, 3:21 PM IST

ಬಳ್ಳಾರಿ: ಮಹಾನಗರ ಪಾಲಿಕೆ ವತಿಯಿಂದ ₹ 3 ಕೋಟಿ ವೆಚ್ಚದಲ್ಲಿ ಸುಸಜ್ಜಿತ ತರಕಾರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಹಾಗೆಯೇ ದೊಡ್ಡ ಮಾರುಕಟ್ಟೆ ನಿರ್ಮಾಣಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈಗಿರುವ ಸಣ್ಣ ಮಾರುಕಟ್ಟೆ ಶಿಥಿಲಾವಸ್ಥೆಗೆ ತಲುಪಿದ್ದು, ಅದನ್ನು ಕೆಡವಲು ಆದೇಶ ಹೊರಡಿಸಿದೆ.

ತರಕಾರಿ ಮಾರುಕಟ್ಟೆ

ಸುಸಜ್ಜಿತ ತರಕಾರಿ ಮಾರುಕಟ್ಟೆ ಈಗಾಗಲೇ ತರಕಾರಿ ಮಾರಾಟಗಾರರಿಗೆ ಮುಕ್ತವಾಗಿದೆ. ಆದರೆ ಮಾರುಕಟ್ಟೆ ಮುಂಭಾಗದಲ್ಲಿ ಮಳೆ ನೀರು ನಿಂತು ಅಧ್ವಾನಗೊಂಡಿದೆ. ಓಡಾಟಕ್ಕೂ ಕಷ್ಟವಾಗಿದೆ. ಹೀಗಾಗಿ ಸೊಳ್ಳೆಗಳ ಕಾಟ ಮಿತಿ ಮೀರಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಜನರಿದ್ದಾರೆ. ಕೋಟ್ಯಂತರ ರೂಪಾಯಿ ವ್ಯಯಿಸಿ ನಿರ್ಮಿಸಿದರೂ ಅವೈಜ್ಞಾನಿಕವಾಗಿದೆ ಎಂದು ಜನರು ದೂರಿದ್ದಾರೆ.

ABOUT THE AUTHOR

...view details