ಕರ್ನಾಟಕ

karnataka

ETV Bharat / state

ಕೋವಿಡ್ ಕಾರ್ಯಕ್ಕೆ ಕರೆ ಬಂದಾಗ ಸ್ವಯಂಪ್ರೇರಿತರಾಗಿ ಸೇವೆಗೆ ಸಿದ್ಧರಾಗಿ: ಕರ್ನಲ್ ರಾಜೇಂದರ್ ಮಲಿಕ್ - Bellary latest news

ಬಳ್ಳಾರಿಯಲ್ಲಿ ಎನ್‌ಸಿಸಿ ಅಧಿಕಾರಿಗಳ ವಾರ್ಷಿಕ ಸಭೆ ನಡೆಯಿತು. ಈ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಕರ್ನಲ್ ರಾಜೇಂದರ್ ಮಲಿಕ್, ಕೋವಿಡ್ ಕಾರ್ಯಕ್ಕೆ ಯಾವುದೇ ಸಮಯದಲ್ಲಿ ಕರೆ ಬಂದರೂ ಸೇವೆಗೆ ಸಿದ್ಧರಿರುವಂತೆ ಕರೆ ನೀಡಿದರು.

ಬಳ್ಳಾರಿ
ಬಳ್ಳಾರಿ

By

Published : Jul 30, 2020, 3:47 PM IST

ಬಳ್ಳಾರಿ :ಎನ್‌ಸಿಸಿಯ ಎಲ್ಲಾ ತರಹದ ಚಟುವಟಿಕೆಗಳಲ್ಲಿ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದು. ಯಾವುದೇ ಸಮಯದಲ್ಲಿ ಜಿಲ್ಲಾಡಳಿತದಿಂದ ಕೋವಿಡ್ ಕಾರ್ಯಕ್ಕೆ ಕರೆ ಬಂದಾಗ ಸ್ವಯಂಪ್ರೇರಿತರಾಗಿ ಸೇವೆ ಸಲ್ಲಿಸಲು ಸಿದ್ಧರರಾಗಿರಬೇಕೆಂದು ಕಮಾಂಡಿಂಗ್ ಅಧಿಕಾರಿ ಕರ್ನಲ್ ರಾಜೇಂದರ್ ಮಲಿಕ್ ಹೇಳಿದ್ದಾರೆ.

ಕರ್ನಾಟಕ ಬೆಟಾಲಿಯನ್‌ನ 34ನೇ ವಿಭಾಗದ ಎನ್‌ಸಿಸಿ ಬಳ್ಳಾರಿ ವತಿಯಿಂದ ನಡೆದ ಅಧಿಕಾರಿಗಳ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ವಚ್ಛ ಭಾರತ ಅಭಿಯಾನ, ಡಿಜಿಟಲ್ ಇಂಡಿಯಾ, ನೈರ್ಮಲ್ಯೀಕರಣ ಹಾಗೂ ಇನ್ನಿತರ ಸಾಮಾಜಿಕ ಚಟುವಟಿಕೆಗಳ ಕುರಿತು ಹಾಗೂ ಪ್ರಸ್ತುತ ಕೋವಿಡ್-19 ಸುರಕ್ಷತೆಯನ್ನು ಕಾಪಾಡುವುದರ ಕುರಿತಂತೆ ಅವರು ಮಾಹಿತಿ ನೀಡಿದರು.

ವಿನೂತನ ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಂಡು ಎನ್‌ಸಿಸಿ ಕೆಡೆಟ್‌ಗಳಲ್ಲಿ ಹೊಸ ಹುಮ್ಮಸ್ಸು, ಪ್ರೇರಣೆಯನ್ನು ತುಂಬಬೇಕು ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು. ಈ ಸಭೆಯಲ್ಲಿ ಎನ್‌ಸಿಸಿಯ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

ABOUT THE AUTHOR

...view details