ಬಳ್ಳಾರಿ: ಇತ್ತಿಚಿನ ದಿನಗಳಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಲಾಗುತ್ತಿದೆ. ಇದರಿಂದ ಸಂವಿಧಾನದ ಆಶಯವೇ ಮಣ್ಣು ಪಾಲಾಗುತ್ತಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಚೆಲುವರಾಜು ಬೇಸರ ವ್ಯಕ್ತ ಪಡಿಸಿದರು.
ಮುಂದಿನ ದಿನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ: ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ
ಸಂವಿಧಾನದಿಂದ ಏಳ್ಗೆ ಕಂಡವರು ತುಟಿಪಿಟಿಕ್ ಎನ್ನದೇ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಅಂಬೇಡ್ಕರ್ ಅಂದರೆ ಏನು ಎಂಬುದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ವ್ಯವಸ್ಥೆಯಲ್ಲಿ ಸಂವಿಧಾನದ ದುರುಪಯೋಗ ತಡೆಯುವುದಕ್ಕೆ ಚಿಂತಿಸಬೇಕಿದೆ. ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ ಎಂದು ದಲಿತ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಚೆಲುವರಾಜು ಅಭಿಪ್ರಾಯಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದ ಒಳ ಸಭಾಂಗಣದಲ್ಲಿ ನಡೆದ ಸಂವಿಧಾನ ಮತ್ತು ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸಹಯೋಗ ಮತ್ತು ಸಮಸಮಾಜ ನಿರ್ಮಾಣ ಸಂಸ್ಥೆ ನೇತೃತ್ವದಲ್ಲಿ ಸಮಗ್ರ ರಾಷ್ಟ್ರಾಭಿವೃದ್ಧಿ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಸಂವಿಧಾನದಿಂದ ಏಳ್ಗೆ ಕಂಡವರು ತುಟಿಪಿಟಿಕ್ ಎನ್ನದೇ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ಅಂಬೇಡ್ಕರ್ ಅಂದರೆ ಏನು ಎಂಬುದನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಿದೆ. ವ್ಯವಸ್ಥೆಯಲ್ಲಿ ಸಂವಿಧಾನದ ದುರುಪಯೋಗ ತಡೆಯುವುದಕ್ಕೆ ಚಿಂತಿಸಬೇಕಿದೆ. ಇಲ್ಲದಿದ್ದರೇ ಮುಂದಿನ ದಿನಮಾನಗಳಲ್ಲಿ ಅಸ್ಪೃಶ್ಯತೆ ಮತ್ತೆ ತನ್ನ ಗತವೈಭವ ಮೆರೆಯಲಿದೆ ಎಂದು ಅಭಿಪ್ರಾಯಿಸಿದರು.
ಸಂವಿಧಾನ ಮತ್ತು ರಾಷ್ಟ್ರಾಭಿವೃದ್ಧಿ ವಿಷಯದ ಬಗ್ಗೆ ದಲಿತ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಡಾ.ಆರ್ ಮೋಹರ್ ರಾಜ್ ಮಾತನಾಡಿ, ಈ ದೇಶದಲ್ಲಿ ಅಲ್ಪಸಂಖ್ಯಾತ, ದಲಿತರು, ಹಿಂದುಳಿದ ವರ್ಗದವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಮೀಸಲಾತಿ ಪಡೆದು ಅವರಿಗೆ ಮೋಸ ಮಾಡುತ್ತಿದ್ದಾರೆ ಎಂದು ಎಂದು ದೂರಿದರು.