ಕರ್ನಾಟಕ

karnataka

By

Published : Feb 6, 2021, 12:18 PM IST

ETV Bharat / state

ರೈತರಿಂದ ಭೂಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸಂಸ್ಥೆ: ಪರಿಹಾರ ನೀಡುವಲ್ಲಿ ವಿಫಲ

ಬಳ್ಳಾರಿ ಜಿಲ್ಲೆಯ ಕುಡಿತಿನಿ- ವೇಣಿವೀರಾಪುರ ಗ್ರಾಮಗಳ ಸಣ್ಣ- ಅತೀ ಸಣ್ಣ ರೈತರಿಂದ ಭೂಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸಂಸ್ಥೆಯು ಈವರೆಗೂ ಕೂಡ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ವಿಫಲಗೊಂಡಿದೆ ಎಂಬ ಆರೋಪವು ಕೇಳಿ ಬಂದಿದೆ.

bellary
ರೈತರಿಗೆ ದೊರಕದ ಸೂಕ್ತ ಪರಿಹಾರ

ಬಳ್ಳಾರಿ: ಗಣಿನಾಡು ಬಳ್ಳಾರಿ - ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾರ್ಯ ಆಮೆಗತಿಯಲ್ಲಿ ಸಾಗಿದೆ.‌ ಈ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೋಸ್ಕರವೇ ಜಿಲ್ಲೆಯ ಕುಡಿತಿನಿ- ವೇಣಿವೀರಾಪುರ ಗ್ರಾಮಗಳ ಸಣ್ಣ - ಅತೀ ಸಣ್ಣ ರೈತರಿಂದ ಭೂಸ್ವಾಧೀನಪಡಿಸಿಕೊಂಡ ರಾಷ್ಟ್ರೀಯ ಹೆದ್ದಾರಿ ಅಥಾರಿಟಿ ಸಂಸ್ಥೆಯು ಈವರೆಗೂ ಕೂಡ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ವಿಫಲಗೊಂಡಿದೆ ಎಂಬ ಆರೋಪ ಕೇಳಿ ಬಂದಿದೆ.

ನ್ಯಾಷನಲ್ ಹೈವೇ ಅಥಾರಿಟಿಯು ಕೆಐಡಿಬಿ ಮೂಲಕ ವಶಕ್ಕೆ ಪಡೆದಿರೋದು ರೈತರ ಆಕ್ರೋಶ

ಕುಡಿತಿನಿ - ವೇಣಿ ವೀರಾಪುರ ಗ್ರಾಮಗಳ ರೈತರು ಹೊಂದಿರುವ ಭೂಮಿಗಳು ಈ ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಪಕ್ಕದಲ್ಲೇ ಇರುವುದರಿಂದ ಈ ಭೂಮಿಗೆ ಭಾರೀ ಬೇಡಿಕೆಯಿದೆ. ಆದರೆ, ನ್ಯಾಷನಲ್ ಹೈವೇ ಅಥಾರಿಟಿ ಅವರು ಅತ್ಯಂತ ಕಡಿಮೆ ದರವನ್ನು ನಿಗದಿಪಡಿಸಿ ಬಲವಂತದಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅಲ್ಲಿನ ರೈತರ ಗಂಭೀರ ಆರೋಪ ಮಾಡಿದ್ದಾರೆ.‌

ಎನ್.ಎ ಇರುವಂತಹ ಭೂಮಿಗೆ 5.50 ಲಕ್ಷ ರೂ. ಹಾಗೂ ನಾನ್ ಎನ್​ಎ ಇರುವಂತಹ ಭೂಮಿಗೆ ಕೇವಲ 1.50 ಲಕ್ಷ ರೂ.ಗಳನ್ನು ನಿಗದಿಪಡಿಸಿ ಸಾಮಾನ್ಯ ರೈತರಿಂದ ಅಂದಾಜು 500 ಎಕರೆಯವರೆಗೂ ಕೂಡ ಭೂಮಿಯನ್ನು ವಶಪಡಿಸಿಕೊಂಡಿದೆ. ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆಗೆ ರೈತರು ಹೋಗಿರೋದು ಇದೀಗ ಬೆಳಕಿಗೆ ಬಂದಿದೆ. ಯಾಕೆಂದರೆ ಈ ಭಾಗದಲ್ಲಿ ಕೈಗೆಟುಕದ ದರದಲ್ಲಿ ಭೂಮಿಯನ್ನು ಖರೀದಿಸಲು ಆಗುವುದಿಲ್ಲ. ಇಂತಹ ಸಂದರ್ಭದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದರೂ ಅತ್ಯಂತ ಕಡಿಮೆ ದರದಲ್ಲಿ ಈ ನ್ಯಾಷನಲ್ ಹೈವೇ ಅಥಾರಿಟಿಯು ಕೆಐಡಿಬಿ ಮೂಲಕ ವಶಕ್ಕೆ ಪಡೆದಿರೋದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಓದಿ:ಪಾಪ್ ಗಾಯಕಿ ರಿಹಾನ್ನಾಗೆ ರೈತರ ಕಷ್ಟ ಗೊತ್ತಾ? ಸಚಿವ ಸದಾನಂದಗೌಡ ಪ್ರಶ್ನೆ

ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ವೇಣಿ ವೀರಾಪುರ ಗ್ರಾಮದ ರೈತ ಮುಖಂಡ ಸಿದ್ದಾರೆಡ್ಡಿ ಅವರು, ನ್ಯಾಷನಲ್ ಹೈವೇ ಅಥಾರಿಟಿಯವರು ಭೂಸ್ವಾಧೀನ ಪಡಿಸಿಕೊಂಡಾಗಲೇ ಕುಡಿತಿನಿ - ವೇಣಿ ವೀರಾಪುರ ಗ್ರಾಮಗಳಲ್ಲಿನ ಭೂಮಿ ಬೆಲೆ ಗಗನಕ್ಕೇರಿತ್ತು. ಅದನ್ನು ಅತ್ಯಂತ ಕಡಿಮೆ ದರದಲ್ಲಿ ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಇದರಿಂದ ಸಣ್ಣ- ಅತೀ ಸಣ್ಣ ರೈತರಿಗೆ ಭಾರೀ ಅನ್ಯಾಯವಾಗಿದೆ.‌ ಕೂಡಲೇ ಅಂದಿನ ಭೂಮಿಯ ಬೆಲೆ ಹಾಗೂ ಸದ್ಯದ ಭೂಮಿಯ ಬೆಲೆಗೆ ಒಲೈಕೆ ಮಾಡಿ ಸೂಕ್ತ ಪರಿಹಾರ ಒದಗಿಸಿಕೊಡುವಲ್ಲಿ ಜಿಲ್ಲಾಡಳಿತ ಮಧ್ಯೆಸ್ಥಿಕೆ ವಹಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details