ಕರ್ನಾಟಕ

karnataka

ETV Bharat / state

ಹೂವಿನಹಡಗಲಿ: ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವು - ಹಗನೂರಿನಲ್ಲಿ ಮಣ್ಣು ಕುಸಿದು ನರೇಗಾ ಕಾರ್ಮಿಕ ಸಾವು

ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ಹೂವಿನಹಡಗಲಿ ಹಗರನೂರಿನಲ್ಲಿ ನಡೆದಿದೆ.

Narega labor died by Soil Collaps in Huvinahadagali
ಮಣ್ಣು ಕುಸಿದು ಬಿದ್ದು ಕೂಲಿ ಕಾರ್ಮಿಕ ಸಾವು

By

Published : Jan 8, 2021, 8:56 AM IST

ಬಳ್ಳಾರಿ : ಹೂವಿನಹಡಗಲಿ ತಾಲೂಕಿನ ಹಗರನೂರು ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೆಲಸ ಮಾಡುತ್ತಿದ್ದ ಕಾರ್ಮಿಕನೊಬ್ಬ ಮೃತಪಟ್ಟಿದ್ದಾನೆ.

ಹಗರನೂರು ಗ್ರಾಮದ ಈಡಿಗರ ನಿಂಗಪ್ಪ (38) ಮೃತಪಟ್ಟ ಕೂಲಿ ಕಾರ್ಮಿಕ. ಮೃತ ನಿಂಗಪ್ಪ ಹೂವಿನಹಡಗಲಿ ತಾಲೂಕಿನ‌ ದೇವಗೊಂಡನಹಳ್ಳಿ ಗ್ರಾಮ ಪಂಚಾಯತ್​ಗೆ ಸೇರಿದ ಉಪನಾಯಕನಹಳ್ಳಿ ಗ್ರಾಮದ ಜಿನುಗು ಕೆರೆಯಲ್ಲಿ ಹೂಳೆತ್ತುವ ಕೆಲಸ ಮಾಡುತ್ತಿದ್ದು, ಈ ವೇಳೆ ಮೈಮೇಲೆ ಮಣ್ಣು ಕುಸಿದು ಬಿದ್ದು ತೀವ್ರ ಗಾಯಗೊಂಡಿದ್ದ. ಕೂಡಲೇ ಆತನನ್ನು ಹೂವಿನಹಡಗಲಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಓದಿ : ಸಿಮೆಂಟ್​ ತುಂಬಿದ ಲಾರಿ ಕಾರಿಗೆ ಡಿಕ್ಕಿ.. ಮಗಳು ಸಾವು!

ಘಟನಾ ಸ್ಥಳಕ್ಕೆ ಹಗರನೂರು ಗ್ರಾಮ ಪಂಚಾಯತ್​ ಪಿಡಿಒ ವೀರಣ್ಣ ನಾಯ್ಕ ಸೇರಿದಂತೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತ ನಿಂಗಪ್ಪನ ಕುಟುಂಬಕ್ಕೆ ನರೇಗಾ ಯೋಜನೆಯಡಿ 75 ಸಾವಿರ ರೂ.ಗಳ ಪರಿಹಾರ ನೀಡಲಾಗುವುದು ಎಂದು ಪಿಡಿಒ ವೀರಣ್ಣನಾಯ್ಕ ತಿಳಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details