ಬಳ್ಳಾರಿ:ಬಳ್ಳಾರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ಮಾಡಿದರು.
ತಾಲೂಕಿನ ಸಂಗನಕಲ್ಲು, ಮೋಕಾ, ರೂಪನಗುಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಶಾಸಕ ನಾಗೇಂದ್ರ ಅವರು ತೆರೆದ ವಾಹನದಲ್ಲಿ ಸಂಚರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಉಗ್ರಪ್ಪನವರಿಗೆ ಮತ ಚಲಾಯಿಸುವಂತೆ ಮತದಾರರಲ್ಲಿ ಮನವಿ ಮಾಡಿಕೊಂಡರು.
ವಿ.ಎಸ್.ಉಗ್ರಪ್ಪ ಪರ ಶಾಸಕ ಬಿ.ನಾಗೇಂದ್ರ ಭರ್ಜರಿ ಪ್ರಚಾರ ಬಳಿಕ ಮಾತನಾಡಿದ ಶಾಸಕ ನಾಗೇಂದ್ರ, ನಾನು ಕಾಂಗ್ರೆಸ್ ಪಕ್ಷದಿಂದ ಗೆದ್ದಿರುವೆ. ಮನಸ್ಸು ಬೇರೆ ಕಡೆ ಇದೆ. ದೇಹ ಮಾತ್ರ ಕಾಂಗ್ರೆಸ್ನಲ್ಲಿದೆ ಎಂದು ಕೆಲವರು ಅಂತಾರೆ. ಅವೆಲ್ಲಾ ಹೇಳೋರು ಹೇಳುತ್ತಾರೆ. ಅದು ಸಹಜ. ಆದರೆ ನಾನು ಮಾತ್ರ ಕಾಂಗ್ರೆಸ್ನಲ್ಲೆ ಇರುವೆ ಎಂದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇವೆ. ಈ ಬಾರಿಯ ಚುನಾವಣೆಯಲಿ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಗೆದ್ದೆ ಗೆಲ್ಲುತ್ತಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.