ಬಳ್ಳಾರಿ:ನಗರದ ಹೊರ ವಲಯದ ಹೊಸಪೇಟೆ ರಸ್ತೆಯ ಮಾಮ ಬಾಂಜ ಫ್ಯಾಮಿಲಿ ಡಾಬದಲ್ಲಿ 1.5 ಕೆ.ಜಿ ಗಾಂಜಾವನ್ನು ವಶಕ್ಕೆ ಪಡೆದು ಡಾಬದ ಮಾಲೀಕ ರಿಚ್ ಪಾಲ್ ಸಿಂಗ್ ಸೇರಿದಂತೆ ಮೂವರನ್ನು ಬಂಧಿಸಿರುವುದಾಗಿ ಗ್ರಾಮೀಣ ಠಾಣೆಯ ಪಿ.ಎಸ್.ಐ ಹನುಮಂತಪ್ಪ ತಿಳಿಸಿದ್ದಾರೆ.
ಫ್ಯಾಮಿಲಿ ಡಾಬದಲ್ಲಿ 1.5 ಕೆ.ಜಿ ಗಾಂಜಾ ವಶಕ್ಕೆ ಪಡೆದ ಪೊಲೀಸರು. ಮಾಲೀಕ ಸೇರಿ ಮೂವರ ಬಂಧನ
ಮಾಮ ಬಾಂಜ ಫ್ಯಾಮಿಲಿ ಡಾಬದಲ್ಲಿ 1.5 ಕೆ.ಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Arrest
ರಿಚ್ ಪಾಲ್ ಸಿಂಗ್ (30), ಕರಣ್ ಸಿಂಗ್ (28),
ಘನಶ್ಯಾಮ್ (24 ) ಬಂಧಿತ ಆರೋಪಿಗಳು. ಇವರಿಂದ 30 ಸಾವಿರ ರೂ ಮೌಲ್ಯದ 1.5 ಕೆ.ಜಿ ಗಾಂಜಾ ವಶಕ್ಕೆ ಪಡೆದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಗ್ರಾಮೀಣ ಠಾಣೆಯ ಡಿವೈಎಸ್ಪಿ ಸತ್ಯನಾರಾಯಣ ರಾವ್, ಸಿಪಿಐ ಆರ್.ಎಸ್ ಬಿರಾದಾರ, ಪಿ.ಎಸ್.ಐ ಹನುಮಂತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.