ಬಳ್ಳಾರಿ: ನಗರದಲ್ಲಿ ಮಂಗಳವಾರ ನೆತ್ತರು ಹರಿದಿದೆ. ರೌಡಿಶೀಟರ್ವೋರ್ವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದಿದ್ದಾರೆ.
ದೇವಿನಗರ ನಿವಾಸಿ ಯಲ್ಲಪ್ಪ ಎಂಬಾತ ಕೊಲೆಗೀಡಾಗಿರುವ ರೌಡಿ ಶೀಟರ್. ಎರಡು ವರ್ಷಗಳ ಹಿಂದಷ್ಟೇ ಹಾಲಿ ಬಿ. ಶ್ರೀರಾಮುಲು ಅವರ ಆಪ್ತರಾಗಿದ್ದ ರೌಡಿ ಶೀಟರ್ ಬಂಡಿ ರಮೇಶ ಎಂಬಾತನನ್ನು ನಗರ ಹೊರವಲಯದ ಡಾಬಾವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ರೌಡಿಶೀಟರ್ ಯಲ್ಲಪ್ಪನು ಬಂಡಿ ರಮೇಶ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಈಗ ಯಲ್ಲಪ್ಪನ ಹೆಣ ಉರುಳಿಸಿದ್ದು ರಮೇಶ್ ಕಡೆಯ ಗ್ಯಾಂಗ್ನವರಾ?, ಇದು ಪ್ರತೀಕಾರದ ಕೊಲೆನಾ ಎಂಬ ಶಂಕೆ ವ್ಯಕ್ತವಾಗಿದೆ.