ಬಳ್ಳಾರಿ: ಹರಪನಹಳ್ಳಿ ತಾಲೂಕಿನಲ್ಲಿ ಸಹೋದರಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಕುಪಿತಗೊಂಡ ಆಕೆಯ ಸಹೋದರ ಮಚ್ಚಿನಿಂದ ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ.
ಅಕ್ರಮ ಸಂಬಂಧ ಆರೋಪ: ಅಣ್ಣನಿಂದಲೇ ತಂಗಿಯ ಕೊಲೆ ಯತ್ನ - Karadidurga village
ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ರೊಚ್ಚಿಗೆದ್ದ ವ್ಯಕ್ತಿಯೊಬ್ಬ ತನ್ನ ತಂಗಿಯ ಕೊಲೆಗೆ ಯತ್ನಿಸಿದ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.
ಕರಡಿದುರ್ಗ ಗ್ರಾಮದ ಹನುಮಂತ ಕೊಲೆಗೆ ಯತ್ನಿಸಿದ ವ್ಯಕ್ತಿ. ದಶಕಗಳ ಹಿಂದಷ್ಟೇ ಮಹಿಳೆಯನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ ಆಕೆ ಗಂಡನನ್ನು ಬಿಟ್ಟು ಬಂದು 5 ವರ್ಷಗಳ ಹಿಂದೆಯೇ ತವರು ಮನೆಯಲ್ಲಿ ವಾಸವಾಗಿದ್ದಳು.
ಈಚೆಗೆ ಮಹಿಳೆ ವ್ಯಕ್ತಿಯೊಬ್ಬನ ಜತೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಕುಪಿತಗೊಂಡ ಆಕೆಯ ಸಹೋದರ ಹನುಮಂತ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿದ್ದಾನೆ. ಈಗ ಗಾಯಗೊಂಡಿರುವ ಮಹಿಳೆ ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹನುಮಂತನಿಗಾಗಿ ಅರಸೀಕೆರೆ ಪೊಲೀಸರು ಬಲೆ ಬೀಸಿದ್ದಾರೆ.