ಬಳ್ಳಾರಿ: ಇಲ್ಲಿನ ಮಹಾನಗರ ಪಾಲಿಕೆಯ 32 ವಾರ್ಡ್ಗಳಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಪಾಲಿಕೆ ಕೆಲವು ತಿಂಗಳಿನಿಂದ ಸಂಬಳ ನೀಡಿಲ್ಲವಂತೆ. ಈ ಹಿನ್ನೆಲೆ ಕೆಲಸಗಾರರು ಜೀವನ ನಡೆಸಲು ಪರಿತಪಿಸುವಂತಾಗಿದೆ.
ಮಿನಿ ಆಟೋ, ಲಾರಿ, ಟ್ರ್ಯಾಕ್ಟರ್ಗಳಲ್ಲಿ ಡ್ರೈವರ್ ಮತ್ತು ಕ್ಲಿನರ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದ್ರೆ ಅವರಿಗೆ ಆರು ತಿಂಗಳಿಂದ ಸಂಬಳ ನೀಡಿಲ್ಲ ಎನ್ನಲಾಗಿದೆ. ಈ ಬಗ್ಗೆ ತಮ್ಮ ನೋವು ತೋಡಿಕೊಂಡಿರುವ ಸಿಬ್ಬಂದಿ, ನಿಮಗೆ ಮಹಾನಗರ ಪಾಲಿಕೆಯಿಂದ ಐದು - ಆರು ತಿಂಗಳಿಗೆ ಸಂಬಳ ಬಂದ್ರೆ ಸಾಲ ನೀಡುವುದು ಹೇಗೆ ಎಂದು ಸಾಲ ಕೊಡುವವರು ಪ್ರಶ್ನಿಸುತ್ತಿದ್ದಾರೆ. ಕಳೆದ 15 ರಿಂದ 20 ವರ್ಷಗಳಿಂದ ಮಹಾನಗರ ಪಾಲಿಕೆಯ ಡ್ರೈವರ್ಗಳಾಗಿ ಕೆಲಸ ಮಾಡುತ್ತಿದ್ದೇವೆ. ಇದನ್ನು ಬಿಟ್ಟರೆ ನಮಗೆ ಬೇರೆ ಕೆಲಸ ಬರೋಲ್ಲ. ಈ ದಿನದಲ್ಲಿ ಹೇಗೆ ತಾನೇ ಜೀವನ ಮಾಡುವುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಾಲ್ಕೈದು ತಿಂಗಳಿಂದ ಸಂಬಳ ನೀಡದ ಪಾಲಿಕೆ ಬಳ್ಳಾರಿ ಮಹಾನಗರ ಪಾಲಿಕೆಯ ಆವರಣ, ವೇಣು ವೀರಾಪುರ, ಸ್ಟೋರ್ಗಳು ಇನ್ನಿತರ ಪ್ರದೇಶದಲ್ಲಿ ಕೆಲಸ ಮಾಡುವ ಸೆಕ್ಯೂರಿಟಿ ಗಾರ್ಡ್ಗಳಿಗೂ ಕಳೆದ ನಾಲ್ಕು ತಿಂಗಳಿಂದ ಸಂಬಳವಾಗಿಲ್ಲವಂತೆ. ಈ ಬಗ್ಗೆ ಸೆಕ್ಯುರಿಟಿಯೊಬ್ಬರು ಮಾತನಾಡಿ, ಏನು ಮಾಡಬೇಕು ಎಂದು ತೋಚುತ್ತಿಲ್ಲ. ಸಾಲ ಮಾಡಿ ಜೀವನ ಮಾಡುತ್ತಿದ್ದೇವೆ ಎಂದು ನೋವು ತೋಡಿಕೊಂಡಿದ್ದಾರೆ.
ಇನ್ನು ಮಹಾನಗರ ಪಾಲಿಕೆಯ ಒಳಚರಂಡಿ ಮತ್ತು ವಾಲ್ಮೆನ್, ಡ್ರೈವರ್, ಕ್ಲಿನರ್, ಎಲೆಕ್ಟ್ರಿಷನ್ ಇನ್ನಿತರ ಕೆಲಸ ಮಾಡುವ ನೂರಾರು ಕಾರ್ಮಿಕರ ಪರಿಸ್ಥಿತಿ ಕೂಡ ಹೀಗೆ ಇದೆ. ಈ ಬಗ್ಗೆ ಆಯುಕ್ತೆ ತುಷಾರಮಣಿ ಸಂಪರ್ಕಿಸಿದರೆ, ಸಂಬಳವಾಗಿಲ್ಲ ಎಂದು ಹೇಳಿದವರನ್ನು ಕರೆದುಕೊಂಡು ಬನ್ನಿ. ಬಳ್ಳಾರಿ ಮಹಾನಗರ ಪಾಲಿಕೆ ವ್ಯವಸ್ಥೆ ಇರೋದೆ ಹೀಗೆ, ನಾಲ್ಕು ಐದು ತಿಂಗಳಿಗೆ ಸಂಬಳವಾಗೋದು. ಏಪ್ರಿಲ್ ತಿಂಗಳಲ್ಲಿ ತೆರೆಗೆ ವಸೂಲಿ ಮಾಡಿದ್ರೆ ಸಂಬಳವಾಗುತ್ತಿತ್ತು. ಈಗ ಇನ್ನು 15 ದಿನಗಳಲ್ಲಿ ಸಂಬಳವಾಗುತ್ತದೆ. ಇದರ ಬಗ್ಗೆ ಸರ್ಕಾರಕ್ಕೆ ಮನವಿ ಪತ್ರ ಬರೆದಿದ್ದೇವೆ ಎಂದು ಹೇಳಿದ್ದಾರೆ.