ಕರ್ನಾಟಕ

karnataka

ETV Bharat / state

ಶರತ್​​ ಬಚ್ಚೇಗೌಡ ಹೇಳಿಕೆಗೆ ಎಂಟಿಬಿ ನಾಗರಾಜ್ ತಿರುಗೇಟು - ಎಂಟಿಬಿ ನಾಗರಾಜ್ ಲೆಟೆಸ್ಟ್ ನ್ಯೂಸ್​

ಇಂದು ನರಸಪುರ ಗ್ರಾಮದ ಪ್ರಚಾರದ ವೇಳೆ ಮಾತನಾಡಿರುವ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಹೇಳಿಕೆಗೆ ತಿರುಗೇಟು​ ನೀಡಿದ್ದಾರೆ. ಯಾರ ಮನೆಯಲ್ಲಿ ಯಾರು ಹೊಡೆದಿದ್ದಾರೆ. ತಾಲೂಕಿನಲ್ಲಿ ಯಾರು ರೌಡಿಸಂ, ಕೊಲೆ ಮಾಡಿದ್ದಾರೆ ಎಂಬುದು ಫಲಿತಾಂಶದಿಂದ ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.

ಎಂಟಿಬಿ ನಾಗರಾಜ್
MTB Nagaraju

By

Published : Nov 28, 2019, 4:48 PM IST

ಹೊಸಕೋಟೆ:ಯಾರು ಯಾರನ್ನ ಹೊಡೆದಿದ್ದಾರೆ ಎಂದು ಇಡೀ ತಾಲೂಕಿಗೆ ಗೊತ್ತು. ಚುನಾವಣೆಯಲ್ಲಿ ಯಾರ ಮನೆಗಳು ಯಾರು ಒಡೆದಿದ್ದಾರೆ ಎಂದು ಮತದಾರರೇ ತೀರ್ಮಾನ ಮಾಡುತ್ತಾರೆ ಎಂದು ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ಹೇಳಿಕೆಗೆ ತಿರುಗೇಟು​ ನೀಡಿದರು.

ಎಂಟಿಬಿ ನಾಗರಾಜ್, ಬಿಜೆಪಿ ಅಭ್ಯರ್ಥಿ

ಇಂದು ತಾಲೂಕಿನ ಬೈಲ್ ನರಸಪುರ ಗ್ರಾಮದ ಪ್ರಚಾರದ ವೇಳೆ ಮಾತನಾಡಿದ ಅವರು, ಈ ತಾಲೂಕಿನಲ್ಲಿ ಯಾರು ಯಾರನ್ನು ಹೊಡೆಸಿದ್ದಾರೆ ಎಂದು ಜನರು ಈ ಚುನಾವಣೆಯಲ್ಲಿ ತೀರ್ಮಾನ ಮಾಡುತ್ತಾರೆ. ಯಾರ ಮನೆಯನ್ನು ಯಾರು ಒಡೆದಿದ್ದಾರೆ. ತಾಲೂಕಿನಲ್ಲಿ ಯಾರು ರೌಡಿಸಂ, ಕೊಲೆ ಮಾಡಿದ್ದಾರೆ ಎಂಬುದು ಫಲಿತಾಂಶದಿಂದ ತಿಳಿಯುತ್ತದೆ ಎಂದರು.

ಅವರು ಮೊದಲು ಜನತಾದಳ ಪಕ್ಷದಲ್ಲಿದ್ದರು. ಆ ಮೇಲೆ ಕಾಂಗ್ರೆಸ್​ಗೆ ಹೋದರು. ನಂತರ ಬಿಜೆಪಿಗೆ ಬಂದರು. ಹಾಗದರೆ ಇವರು ಎಷ್ಟು ಮನೆಗಳನ್ನು ಒಡೆದಿದ್ದಾರೆ. ಬಾಣದ ಗುರುತಾಯಿತು, ಚಕ್ರದ ಗುರುತಾಯಿತು, ಬಿಲ್ಲಿನ ಗುರುತಾಯಿತು, ನೇಗಿಲ ಗುರುತಾಯಿತು, ಕಮಲದ ಗುರುತಾಯಿತು... ಹೀಗೆ ಎಷ್ಟೆಲ್ಲ ಮನೆಗಳನ್ನು ಒಡೆದು ಬಂದಿದ್ದಾರೆ ಎಂಬುದನ್ನು ನೀವೇ ಹೇಳಬೇಕು ಎಂದರು.

ಅವರದ್ದು ಬಾರಿ ನಾಟಕ. ರಾಜಕೀಯದ ನಾಟಕ. ನಿನ್ನೆ ಸಮಾವೇಶಕ್ಕೂ ಬರಲಿಲ್ಲ. ಇದರ ಬಗ್ಗೆ ಪಕ್ಷದ ನಾಯಕರು ಕ್ರಮ ತೆಗೆದುಕೊಳ್ಳುತ್ತಾರೆ. ಪಕ್ಷಕ್ಕಿಂತ ದೊಡ್ಡವರು ಯಾರು ಇಲ್ಲ. ಪಕ್ಷದ ಶಿಸ್ತಿಗೆ ಬದ್ಧರಾಗಿರಬೇಕು. ಪಕ್ಷ ಹಾಗೂ ಶಿಸ್ತಿನ ವಿರುದ್ಧವಾಗಿ ಮೀರಿ ನಡೆದರೆ ಕ್ರಮ ಕೈಗೊಳ್ಳುಬೇಕು ಎಂದರು.

ABOUT THE AUTHOR

...view details