ಬಳ್ಳಾರಿ:ಶಾಸಕ ಎಲ್ ಬಿ ಪಿ ಭೀಮಾನಾಯ್ಕ ಅವರು ತೋಳು ತಟ್ಟಿ ದುಂಡಾವರ್ತನೆ ಮಾಡಿರೋದು ಸರಿಯಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಸಚಿವ ಶ್ರೀರಾಮುಲು ಮಾತನಾಡಿದರು ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಬ್ಬ ಜವಾಬ್ದಾರಿಯುತ ಶಾಸಕ ಸ್ಥಾನದಲ್ಲಿರುವವರಿಗೆ ಇಂತಹ ವರ್ತನೆ ಶೋಭೆ ತರುವುದಿಲ್ಲ. ನಿನ್ನೆಯ ದಿನ ಶಾಸಕ ಭೀಮನಾಯ್ಕ ಅವರು ಮೆರವಣಿಗೆ ಮೂಲಕ ಪುರಸಭೆಗೆ ತೆರಳಿದ್ದಾರೆ.
ಇದನ್ನ ನಮ್ಮ ಬಿಜೆಪಿ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಭೀಮನಾಯ್ಕ ಅವಾಚ್ಯ ಶಬ್ಧಗಳಿಂದ ನಿಂದಿಸಿ ಭುಜ ತಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಯಾರೂ ಕೂಡ ತಪ್ಪು ಮಾಡಿಲ್ಲ. ಗುಂಪು ಕಟ್ಟಿಕೊಂಡು ಬಂದು ದಾಂಧಲೆ ಮಾಡಿ ಬಿಜೆಪಿ ಮೇಲೆ ಆರೋಪ ಮಾಡೋದು ಸರಿಯಲ್ಲ ಎಂದರು.
ನವೆಂಬರ್ 17ರಂದು ಕಾಲೇಜು ಆರಂಭ ಹಿನ್ನೆಲೆ ಸಮಾಜ ಕಲ್ಯಾಣ ಇಲಾಖಾ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಹಾಗೂ ವಸತಿ ಶಾಲೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಸಂಬಂಧ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.
ಕಾಲೇಜು, ವಸತಿ ನಿಲಯಗಳನ್ನು ಸ್ಯಾನಿಟೈಸ್ ಮಾಡಲಾಗುವುದು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪಾಸಿಟಿವ್ ಕೇಸ್ ಬಂದ್ರೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ, ಲ್ಯಾಪ್ಟ್ಯಾಪ್ ಹಾಗೂ ನೋಟ್ಬುಕ್ ಕೊಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.