ಬಳ್ಳಾರಿ:ಇಬ್ಬರು ಮಕ್ಕಳೊಂದಿಗೆ ಕಾಲುವೆಯಲ್ಲಿ ಜಿಗಿದು ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಸಂಡೂರಿನಲ್ಲಿ ನಡೆದಿದೆ. ಪಾರ್ವತಿ (37), ಶ್ರೇಯಾ (16) ಹಾಗೂ ಮಾನಸ (13) ಆತ್ಮಹತ್ಯೆ ಮಾಡಿಕೊಂಡವರು ಎಂದು ತಿಳಿದುಬಂದಿದೆ.
ಮೂಲತಃ ಸಿರುಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದವರಾದ ಇವರು ಸಂಡೂರಿನಲ್ಲಿ ಕಿರಾಣಿ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಶುಕ್ರವಾರ ಶ್ರೇಯಾ ಶವ ತಿರುಮಲ ನಗರ ಕ್ಯಾಂಪ್ನ 15ನೇ ವಿತರಣಾ ಕಾಲುವೆಯಲ್ಲಿ, ಶನಿವಾರ ಮಾನಸ ಮೃತದೇಹ ತಾಳೂರು ರಸ್ತೆಯ 14 ವಿತರಣಾ ಕಾಲುವೆ ಬಳಿ ಹಾಗೂ ಭಾನುವಾರ ಪಾರ್ವತಿ ಶವ ಅಸುಂಡಿ ಬಳಿಯ 15ನೇ ವಿತರಣಾ ಕಾಲುವೆಯಲ್ಲಿ ಸಿಕ್ಕಿದೆ.