ಕರ್ನಾಟಕ

karnataka

ETV Bharat / state

ಬೆಕ್ಕೊಂದು ನಾಯಿ ಮರಿಗೆ ಜನ್ಮ ನೀಡೀತೆ!...ಇದು ಸಾಧ್ಯವಾ?... ಈ ವಿಡಿಯೋವನ್ನೊಮ್ಮೆ ನೋಡಿಬಿಡಿ! - ಬಳ್ಳಾರಿ ಸುದ್ದಿ

ಬಳ್ಳಾರಿಯ ಸಂಡೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ‌ ರಾಮಕೃಷ್ಣ ಎಂಬುವವರ ಮನೆಯಲ್ಲಿ ತಾಯಿ ಬೆಕ್ಕೊಂದು ತನ್ನ ನವಜಾತ ಮರಿಗಳೊಂದಿಗೆ ನಾಯಿ ಮರಿಗೂ ಹಾಲುಣಿಸುತ್ತಿದೆ.

mother-cat-feed-milk-to-puppy-at-bellary
mother-cat-feed-milk-to-puppy-at-bellary

By

Published : Feb 22, 2020, 5:04 PM IST

Updated : Feb 22, 2020, 6:50 PM IST

ಬಳ್ಳಾರಿ:ಅನಾದಿ ಕಾಲದಿಂದಲೂ ಬೆಕ್ಕು ಮತ್ತು ನಾಯಿ ಅಜಾತ ಶತ್ರುಗಳು ಅಂತಾರೆ. ಒಂದನ್ನು ಕಂಡರೆ ಮತ್ತೊಂದಕ್ಕೆ ಆಗುವುದಿಲ್ಲ. ಒಂದಕ್ಕೊಂದು ಜೊತೆ ಸೇರುವುದಿಲ್ಲ ಎಂಬ ಮಾತಿದೆ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಗಣಿನಾಡಿನಲ್ಲಿ ತಾಯಿ ಬೆಕ್ಕೊಂದು ತನ್ನ ನವಜಾತ ಮರಿಗಳೊಂದಿಗೆ ನಾಯಿ ಮರಿಯೊಂದಕ್ಕೆ ಹಾಲುಣಿಸುತ್ತಿದೆ.

ಹೌದು, ಜಿಲ್ಲೆಯ ಸಂಡೂರು ತಾಲೂಕಿನ ನಾಗೇನಹಳ್ಳಿ ಗ್ರಾಮದ‌ ರಾಮಕೃಷ್ಣ ಎಂಬುವವರ ಮನೆಯಲ್ಲಿ ಈ ರೀತಿಯ ಅಪರೂಪದ ಪ್ರಸಂಗ ನಡೆದಿದೆ.

ಬೆಕ್ಕೊಂದು ನಾಯಿ ಮರಿಗೆ ಜನ್ಮ ನೀಡೀತೆ?

ಎರಡು ತಿಂಗಳ ಹಿಂದೆ ಗರ್ಭಿಣಿಯಾಗಿದ್ದ ಈ ಬೆಕ್ಕು ಇಂದು ತನ್ನ ಮರಿಗಳಿಗೆ ಜನ್ಮ ನೀಡಿದೆ. ಆದರೆ ಅಚ್ಚರಿಯಂತೆ ಬೆಕ್ಕು ಮರಿಗಳೊಂದಿಗೆ ನಾಯಿ ಮರಿ ಕೂಡ ಕಾಣಿಸಿಕೊಂಡಿದೆ. ಇದು ಗೊಂದಲಕ್ಕೂ ಕಾರಣವಾಗಿದೆ. ನಮ್ಮ ಗರ್ಭಿಣಿ ಬೆಕ್ಕೇ ನಾಯಿ ಮರಿಗೂ ಜನ್ಮ ನೀಡಿರಬಹುದು ಎಂದು ಮನೆಯ ಸದಸ್ಯ ರಾಮಕೃಷ್ಣ ಹೇಳುವ ಮೂಲಕ ಗ್ರಾಮದವರನ್ನು ಮೂಗಿನ ಮೇಲೆ ಕೈ ಇಡುವಂತೆ ಮಾಡಿದ್ದಾರೆ.

ಇದೆಲ್ಲದರ ಹೊರತಾಗಿಯೂ ತಾಯಿ ಬೆಕ್ಕು ತನ್ನ ಮೂರು ಬೆಕ್ಕಿನ ಮರಿ ಜೊತೆ ಜೊತೆಗೆ ನಾಯಿ ಮರಿಗೆ ಹಾಲುಣಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಇದು ನಿಜವೇ ಇಲ್ಲಾ ಸುಳ್ಳೇ ಎಂಬ ಸತ್ಯಾಸತ್ಯತೆಯನ್ನು ಪಶು ವೈದ್ಯರೇ ಪರೀಕ್ಷಿಸಿ ಹೇಳಬೇಕಿದೆ.

Last Updated : Feb 22, 2020, 6:50 PM IST

ABOUT THE AUTHOR

...view details