ಕರ್ನಾಟಕ

karnataka

ETV Bharat / state

ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ: ಕುರಿಗಾಹಿ ನೆರವಿಂದ ಮಗು ರಕ್ಷಣೆ, ಇಬ್ಬರು ನಾಪತ್ತೆ - ತುಂಗಭದ್ರಾ ಎಲ್​ಎಲ್​ಸಿ ಕಾಲುವೆ

ಕೌಟುಂಬಿಕ ಕಲಹಕ್ಕೆ ಬೇಸತ್ತು ನಾಲ್ವರು ಹೆಣ್ಣುಮಕ್ಕಳ ತಾಯಿಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಕಾಲುವೆ ನೀರಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ.

Mother attempted suicide with two children  saved the child by locals in Bellary  woman suicide attempt with children  ತಾಯಿ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ  ಮಗುವನ್ನು ರಕ್ಷಿಸಿದ ಕುರಿಗಾಯಿ  ಕೌಟುಂಬಿಕ ಕಲಹಕ್ಕೆ ಬೇಸತ್ತು ನಾಲ್ಕು ಹೆಣ್ಣುಮಕ್ಕಳ ತಾಯಿ  ತಾಯಿಯೊಬ್ಬಳು ತನ್ನಿಬ್ಬರ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನ  ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ  ತುಂಗಭದ್ರಾ ಎಲ್​ಎಲ್​ಸಿ ಕಾಲುವೆ  ಕೌಟುಂಬಿಕ ಕಲಹ ಹಿನ್ನೆಲೆ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ
ಮಗುವನ್ನು ರಕ್ಷಿಸಿದ ಕುರಿಗಾಯಿ

By

Published : Jan 13, 2023, 7:16 AM IST

Updated : Jan 13, 2023, 9:03 AM IST

ಬಳ್ಳಾರಿ:ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಎಂಬಲ್ಲಿ ನಡೆದಿದೆ. ತುಂಗಭದ್ರಾ ಎಲ್​ಎಲ್​ಸಿ ಕಾಲುವೆಗೆ ಲಕ್ಷ್ಮೀ ಎಂಬಾಕೆ ಇಬ್ಬರು ಮಕ್ಕಳೊಂದಿಗೆ ಹಾರಿದ್ದಾರೆ. ಈ ವೇಳೆ ಕುರಿ ಕಾಯುತ್ತಿದ್ದ ಆನಂದ್ ಹಾಗೂ ಮತ್ತಿತರರು ನಾಲ್ಕು ವರ್ಷದ ಮಗಳು ವೆನಿಲಾಳನ್ನು ರಕ್ಷಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಲಕ್ಷ್ಮೀ ಬಳ್ಳಾರಿ ತಾಲೂಕಿನ ಗುಗ್ಗರಟ್ಟಿ ಗ್ರಾಮದ ನಿವಾಸಿಯಾಗಿದ್ದು, ಕೌಟುಂಬಿಕ ಕಲಹದ ಕಾರಣಕ್ಕೆ ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗ್ತಿದೆ. ಇವರಿಗೆ 16 ವರ್ಷದ ಹಿಂದೆ ಗುಗ್ಗರಟ್ಟಿ ನಿವಾಸಿ ವೀರಭದ್ರ ಎಂಬವರ ಮದುವೆಯಾಗಿತ್ತು. ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಹುಟ್ಟಿಲ್ಲ, ಹೆಣ್ಣುಮಕ್ಕಳೇ ಜನಿಸಿದ್ದಾರೆ ಎಂಬ ಕಾರಣಕ್ಕೆ ಪ್ರತಿದಿನ ಪತಿ ವೀರಭದ್ರ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.

ಇದರಿಂದ ಬೇಸತ್ತು ಲಕ್ಷ್ಮೀ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಲುವೆ ಬಳಿ ಕುರಿ ಕಾಯುತ್ತಿದ್ದ ಆನಂದ ಮತ್ತು ಮತ್ತಿತರರು ಇವರನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ನಾಲ್ಕು ವರ್ಷದ ಮಗುವೊಂದನ್ನೇ ಅವರು ರಕ್ಷಿಸಲು ಸಾಧ್ಯವಾಗಿದೆ.

ಈ ಘಟನೆ ಕುರಿತು ಸ್ಥಳೀಯರು ಮೋಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಕ್ಷ್ಮೀ ಮತ್ತು ಶಾಂತಿಯ ದೇಹಕ್ಕಾಗಿ ಹುಡುಕಾಟ ಕಾರ್ಯ ನಡೆಸುತ್ತಿದ್ದಾರೆ. ಲಕ್ಷ್ಮೀ ಮತ್ತು ಆಕೆಯ ಎರಡು ವರ್ಷದ ಮಗು ಪತ್ತೆಯಾಗಿಲ್ಲ. ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಜ್ವರದಿಂದ ಆಸ್ಪತ್ರೆಗೆ ದಾಖಲಾದ ಯುವಕ ಸಾವು: ದವಾಖಾನೆ ವಿರುದ್ದ ಮೃತನ ಪೋಷಕರ ಆಕ್ರೋಶ

ಮಕ್ಕಳ ಕೊಲೆಗೈದು ತಾಯಿ ಆತ್ಮಹತ್ಯೆ:ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ರೈತ ಅರ್ಜುನ್ ಮತ್ತು ರೇಖಾ ಕೆಲ ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಮದುವೆಯಾಗಿ ಹಲವು ವರ್ಷಗಳು ಕಳೆದರೂ ಸಹ ಸಣ್ಣಪುಟ್ಟ ಕಲಹ ಹೊಂದಿದ್ದರು ಎನ್ನಲಾಗಿದೆ. ಆದರೂ ಸಂಸಾರ ಸುಖವಾಗಿಯೇ ಸಾಗುತ್ತಿತ್ತು. ಎಂದಿನಂತೆ ಅರ್ಜುನ್​ ಕಬ್ಬು ಕಟಾವು​ ಮಾಡುವುದಕ್ಕೆ ಹೊಲಕ್ಕೆ ತೆರಳಿದ್ದಾರೆ. ರೇಖಾ ಇತ್ತೀಚೆಗೆ ಕೆಲ ವಿಚಾರಗಳಿಗಾಗಿ ಮಾನಸಿಕವಾಗಿ ನೊಂದಿದ್ದರು ಎಂದು ಹೇಳಲಾಗುತ್ತಿತ್ತು. ರೇಖಾ ಪ್ರತಿದಿನ ಮಕ್ಕಳ‌ ಓದು, ಪಾಲನೆ ಪೋಷಣೆ ಕುರಿತು ಹೆಚ್ಚಾಗಿ ಚಿಂತಿಸುತ್ತಿದ್ದರಂತೆ. ಇದರ ಬಗ್ಗೆ ಬಹಳ ಆಲೋಚಿಸಿದ ರೇಖಾ ಕೊನೆಗೆ ಮಕ್ಕಳನ್ನು ಕೊಲೆಗೈದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪೊಲೀಸ್‌ ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ:ವಿಚ್ಛೇದಿತ ಗೆಳೆಯನೊಂದಿಗೆ ವಿಡಿಯೋಕಾಲ್‌ನಲ್ಲಿ ವಿವಾಹಿತ ಮಹಿಳೆ ಆತ್ಮಹತ್ಯೆ

Last Updated : Jan 13, 2023, 9:03 AM IST

ABOUT THE AUTHOR

...view details