ಬಳ್ಳಾರಿ:ನಗರ ಹೊರವಲಯದ ಸಂಜೀವರಾಯನಕೋಟೆ ಮನೆಯೊಂದರಲ್ಲಿ ನಡೆದಿದ್ದು ಸಿಲಿಂಡರ್ ಸ್ಫೋಟ ಅಲ್ಲ. ಅಲ್ಲಿ ನಡೆದಿದ್ದು ಆತ್ಮಹತ್ಯೆಯಂತೆ.
ಹೌದು, ಹಾಗಂತ ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಅಗ್ನಿ ಶಾಮಕದಳ ಸಿಬ್ಬಂದಿಗಳೇ ಖಚಿತ ಪಡಿಸಿದ್ದಾರೆ. ಸಿಲಿಂಡರ್ ಮನೆಯೊಳಗೆ ಇರಲಿಲ್ಲ ಮನೆ ಹೊರಗಡೆ ಇದ್ದವು. ವಾಸ್ತವವಾಗಿ ನೋಡಬೇಕಾದ್ರೆ ಮನೆಯಲ್ಲಿ ಅವರಿಬ್ಬರು ಬೆಂಕಿಗೆ ಆಹುತಿಯಾಗಿದ್ದಾರೆ ಅದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿಲಿಂಡರ್ ಸ್ಫೋಟಗೊಂಡಿರುವುದು ಪಾರ್ವತೆಮ್ಮ (55) ಮಗಳು ಹುಲಿಗೆಮ್ಮ ಎಂಬುವವರು ಬೆಂಕಿಗೆ ಆಹುತಿಯಾದವರೆಂದು ಗುರುತಿಸಲಾಗಿದೆ. ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಈ ಕಟುಸತ್ಯ ಬೆಳಕಿಗೆ ಬಂದಿದೆ.
ವಿವಾಹ ವಿಚ್ಚೇದನ ವಿವಾದ ಕುರಿತು ಈ ದಿನ ಕೋರ್ಟ್ನಲ್ಲಿ ವಿಚಾರಣೆ ಇತ್ತು. ಆ ವಿಚಾರಣೆ ಸಲುವಾಗಿ ದಂಪತಿಗಳಿಬ್ಬರ ನಡುವೆ ಕಚ್ಚಾಟ ನಡೆದಿತ್ತು. ಈ ಘಟನೆಯಿಂದ ಮನನೊಂದು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.