ಕರ್ನಾಟಕ

karnataka

ETV Bharat / state

ವಿಜಯನಗರ: ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಗ್ರಾಮದಲ್ಲಿರುವ ಮೂರು ಬೋರ್​ವೆಲ್​​ಗಳ ಪೈಕಿ ಎರಡು ಬೋರ್​ವೆಲ್ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಇದೆ. ಆದರೂ ಗ್ರಾಮ ಪಂಚಾಯಿತಿ ಯವರು ನಿರ್ಲಕ್ಷ್ಯದಿಂದ ನೀರು ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

more-than-50-people-are-ill-due-to-pollute-water
ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

By

Published : Sep 23, 2021, 2:24 PM IST

Updated : Sep 23, 2021, 2:53 PM IST

ಹೊಸಪೇಟೆ(ವಿಜಯನಗರ): ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿರುವ ಘಟನೆ ವಿಜಯನಗರ ಜಿಲ್ಲೆಯ‌ ಹೂವಿನಹಡಗಲಿ ತಾಲೂಕು ಮಕರಬ್ಬಿ ಗ್ರಾಮದಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಕಾಂತೆಬೆನ್ನೂರು ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಮಂದಿ ಅಸ್ವಸ್ಥ

ಜೆಜೆಎಂ ಯೋಜನೆಯಡಿ ಪೈಪ್​​​ಲೈನ್​​ಗಾಗಿ ಕಾಲುವೆ ಅಗೆದು ತಿಂಗಳುಗಳೇ ಕಳೆದಿದೆ. ಆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಕುಡಿಯುವ ನೀರಿನಲ್ಲಿ ಕಲುಷಿತ ನೀರು ಸೇರ್ಪಡೆಯಾಗಿದೆ ಎನ್ನಲಾಗ್ತಿದೆ. ಗ್ರಾಮದಲ್ಲಿರುವ ಮೂರು ಬೋರ್​ವೆಲ್​​ಗಳ ಪೈಕಿ ಎರಡು ಬೋರ್​ವೆಲ್ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಇದೆ. ಆದರೂ ಗ್ರಾಮ ಪಂಚಾಯಿತಿಯವರ ನಿರ್ಲಕ್ಷ್ಯದಿಂದ ನೀರು ಸರಬರಾಜು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ:ಅರ್ಜಿ ಸಲ್ಲಿಸಿ 16 ದಿನಗಳೇ ಕಳೆದವು: ಹೈದರಾಬಾದ್​ನಿಂದ ಬಂದು ಬಸ್ ನಿಲ್ದಾಣದಲ್ಲಿಯೇ ತಂಗಿದ ಕುಟುಂಬ

Last Updated : Sep 23, 2021, 2:53 PM IST

ABOUT THE AUTHOR

...view details