ಕರ್ನಾಟಕ

karnataka

ETV Bharat / state

ಕಪಿಚೇಷ್ಟೆ! ದೇಗುಲದಲ್ಲಿ ಮಲಗಿದ್ದಾದ ಕಚ್ಚಿದ ಮಂಗ, ವೃದ್ಧ ಗಂಭೀರ - bellary latest news

ಕಾಕುಬಾಳು ಗ್ರಾಮದ ಆಂಜನೇಯ ದೇಗುಲದಲ್ಲಿ ಮಲಗಿಕೊಂಡಿದ್ದ ವೃದ್ಧನಿಗೆ ಮಂಗ ಕಚ್ಚಿದ್ದು, ಗಂಭೀರವಾಗಿ ಗಾಯಗೊಳಿಸಿದೆ.

monkey

By

Published : Sep 25, 2019, 10:46 AM IST

ಬಳ್ಳಾರಿ: ಹೊಸಪೇಟೆ ತಾಲೂಕಿನ ಕಾಕುಬಾಳು ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಮಂಗ ದೇವಾಲಯದಲ್ಲಿ ಮಲಗಿದ್ದ ವೃದ್ಧನ ಕತ್ತು ಹಾಗೂ ಎದೆಭಾಗವನ್ನು ಕಚ್ಚಿ ಗಂಭೀರ ಗಾಯಗೊಳಿಸಿದ ಘಟನೆ ನಡೆದಿದೆ.

ಕಾಕುಬಾಳು ಗ್ರಾಮದ ಆಂಜನೇಯ ದೇಗುಲದಲ್ಲಿ ಮಲಗಿಕೊಂಡಿದ್ದ ಗೌಡರ ಶಿವರುದ್ರಪ್ಪ (80) ಎಂಬುವವರ ಮೇಲೆ ಮಂಗ ದಾಳಿ ನಡೆಸಿದೆ.

ದಾಳಿಯಿದ ರಕ್ತಸ್ರಾವವಾಗಿ ಗಂಭೀರ ಗಾಯಗೊಂಡಿದ್ದ ವೃದ್ಧನನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಅವರ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಾಕುಬಾಳು ಗ್ರಾಮದಲ್ಲಿ ಮಂಗಗಳ ಹಾವಳಿ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲೇ ರಾಜಾರೋಷವಾಗಿ ಓಡಾಡುತ್ತಿವೆ. ಹೀಗಾಗಿ ಗ್ರಾಮದ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಒಬ್ಬೊಬ್ಬರೇ ದಾರಿಯಲ್ಲಿ ಓಡಾಡುವುದಕ್ಕೆ ಹೆದರುತ್ತಿದ್ದಾರೆ.

ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳ ಹಾವಳಿಯಿಂದ ಗ್ರಾಮಸ್ಥರನ್ನು ಮುಕ್ತಗೊಳಿಸಬೇಕು ಎಂಬ ಆಗ್ರಹ ಕೇಳಿಬರ್ತಿದೆ.

ABOUT THE AUTHOR

...view details