ಹೊಸಪೇಟೆ: ಸರ್ಕಾರದ ಆದೇಶವನ್ನು ಧಿಕ್ಕರಿಸಿ ಇಂದು ಹೊಸಪೇಟೆ ತಾಲೂಕು ಆರೋಗ್ಯ ಕೇಂದ್ರದ ಬಳಿಯ ಇಂದಿರಾ ಕ್ಯಾಂಟೀನ್ನಲ್ಲಿ ಹಣ ಪಡೆದುಕೊಂಡು ಜನರಿಗೆ ಟಿಫಿನ್ ನೀಡುತ್ತಿರುವುದು ಬೆಳಕಿಗೆ ಬಂದಿದೆ.
ಹೊಸಪೇಟೆ: ಹಣ ಪಡೆದು ಇಂದಿರಾ ಕ್ಯಾಂಟೀನ್ನಲ್ಲಿ ಆಹಾರ ವಿತರಣೆ - Money taken at Indira Canteen in Hospete despite of High Court order
ಕೋವಿಡ್ ಸಂಕಷ್ಟದ ಕಾಲದಲ್ಲಿ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ಕೊಡಲು ರಾಜ್ಯ ಸರ್ಕಾರ ಸೂಚಿಸಿದೆ. ಆದ್ರೆ, ಹೊಸಪೇಟೆಯ ತಾಲೂಕು ಆರೋಗ್ಯ ಕೇಂದ್ರದ ಬಳಿಯ ಇಂದಿರಾ ಕ್ಯಾಂಟೀನ್ನಲ್ಲಿ ಹಣ ಪಡೆದುಕೊಂಡು ಜನರಿಗೆ ಟಿಫಿನ್ ನೀಡಲಾಗುತ್ತಿದೆ.
ಹಣ ಪಡೆದು ಉಪಹಾರ ವಿತರಣೆ
ಕೋವಿಡ್ ಸಂಕಷ್ಟದ ಕಾಲದಲ್ಲಿ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ಕೊಡಲು ರಾಜ್ಯ ಸರ್ಕಾರ ಸೂಚಿಸಿದೆ. ಆದರೆ, ಹೊಸಪೇಟೆಯಲ್ಲಿ ಜನರಿಂದ ಹಣ ಪಡೆದುಕೊಂಡು ಉಪಹಾರ ನೀಡುತ್ತಿರುವುದು ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ.
ಹಣ ಪಡೆಯುತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.