ಕರ್ನಾಟಕ

karnataka

ETV Bharat / state

ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಜಣ ಜಣ ಕಾಂಚಾಣದ ಸದ್ದು.. ಕೋಟಿ ರೂಪಾಯಿಗೆ ಸೇಲ್ ಆಗ್ತಿದೆಯಂತೆ ಪಕ್ಷಗಳ ಟಿಕೆಟ್ - Congress BJP demands money for Ticket

ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಹಣ ಬೇಡಿಕೆ ಇಟ್ಟಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಕೋಟಿ ರೂಪಾಯಿಗೆ ಟಿಕೆಟ್ ಬಿಕರಿಯಾಗುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ.

Bellary Munciple election
ಪಾಲಿಕೆ ಚುನಾವಣೆಯಲ್ಲಿ ಹಣ ರಾಜಕೀಯದ ಆರೋಪ

By

Published : Apr 15, 2021, 3:39 PM IST

ಬಳ್ಳಾರಿ:ಮಹಾನಗರ ಪಾಲಿಕೆ ಚುನಾವಣೆ ಸಮೀಪಿಸುತ್ತಿದ್ದಂತೆ ಭರದ ಸಿದ್ದತೆಯಲ್ಲಿ ತೊಡಗಿರುವ ಎರಡೂ ರಾಷ್ಟ್ರೀಯ ಪಕ್ಷಗಳು ಇಂತಿಷ್ಟು ಹಣಕ್ಕೆ ಟಿಕೆಟ್ ಹರಾಜಿಗಿಟ್ಟಿವೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದ್ದು, ಇವೆಲ್ಲವನ್ನೂ ಪರಿಹರಿಸಲು ಉತ್ತಮವಾದ ಆಡಳಿತ ಬರುತ್ತದೆ ಎಂದು ಜನ ನಿರೀಕ್ಷೆಯಲ್ಲಿದ್ದರೆ. ಚುನಾವಣೆಯಲ್ಲಿ ಗೆದ್ದು ಜನರ ಸಮಸ್ಯೆಗಳನ್ನು ಪರಿಹರಿಸಬೇಕಿದ್ದ ಪ್ರಮುಖ ಪಕ್ಷಗಳು ತಮ್ಮ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಕೋಟಿ ರೂ.ಗೂ ಅಧಿಕ ಮೊತ್ತದ ಹಣದ ಬೇಡಿಕೆ ಇಟ್ಟಿವೆಯಂತೆ.

ಪಾಲಿಕೆ ಚುನಾವಣೆಯಲ್ಲಿ ಹಣ ರಾಜಕೀಯದ ಆರೋಪ

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮ ಪಕ್ಷದ ಟಿಕೆಟ್ ಆಕಾಂಕ್ಷಿಗಳಿಗೆ ಹಣ ಬೇಡಿಕೆ ಇಟ್ಟಿವೆ ಎಂಬ ಆರೋಪಗಳು ಕೇಳಿ ಬಂದಿವೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ, ಈಗಾಗಲೇ ಟಿಕೆಟ್​ ಆಕಾಂಕ್ಷಿಗಳಿಂದ 70 ಲಕ್ಷ ರೂ. ಹಣ ಸಂಗ್ರಹ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್ ಪಕ್ಷ ಈ ಹಿಂದಿನ ಸದಸ್ಯರಿಗೆ ಟಿಕೆಟ್​ ನೀಡುವ ಮೂಲಕ ಟಿಕೆಟ್​ ಮಾರಾಟಕ್ಕಿಲ್ಲ ಎಂಬ ಸಂದೇಶ ಸಾರಲು ಕೊಂಚ ಮಟ್ಟಿನ ಪ್ರಯತ್ನ ನಡೆಸಿದೆ. ಆದರೆ, ಬಿಜೆಪಿ ಹಣ ಇದ್ದವರಿಗೆ ಮಾತ್ರ ಟಿಕೆಟ್ ಎಂಬ ಸ್ಪಷ್ಟ ಸೂಚನೆ ನೀಡಿದೆ. ಒಟ್ಟಿನಲ್ಲಿ ಈ ಚುನಾವಣೆಯಲ್ಲಿ ಹಣ ಹೊಳೆ ಹರಿಯುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂಬುವುದು ಜನರ ಮಾತು.

ಓದಿ : ಲೇ ಸಿದ್ದರಾಮಯ್ಯ ಸುಮ್ಮನಿರಲೇ ಎಂದು ಹೇಳುವುದಕ್ಕೆ ನನಗೆ ಬರೋದಿಲ್ವಾ: ಸಚಿವ ಈಶ್ವರಪ್ಪ

ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್​ನ ಹಿರಿಯ ಮುಖಂಡ ಎನ್. ಪ್ರತಾಪರೆಡ್ಡಿ, ಮಹಾನಗರ ಪಾಲಿಕೆಯಲ್ಲಿ ಭೂ ಕಬಳಿಕೆ ಮಾಡುವ ಜಾಲವೇ ಇದೆ. ಅದಕ್ಕೆ ಅಧಿಕಾರಿ ವರ್ಗದವರ ಸಾಥ್ ಕೂಡ ಇದೆ. ಖಾಲಿ ನಿವೇಶನ ಹಾಗೂ ಮನೆ ತೆರಿಗೆಯಲ್ಲಿ ವಿನಾಯಿತಿ ನೀಡುವ ಭರವಸೆ ನೀಡುವ ಮತ್ತು ಅದನ್ನೇ ಚುನಾವಣಾ ಪ್ರಣಾಳಿಕೆಯನ್ನಾಗಿಸುವ ರಾಜಕೀಯ ಪಕ್ಷದ ಅಭ್ಯರ್ಥಿಗಳಿಗೆ ಈ ಬಾರಿ ತಮ್ಮ ಮತ ನೀಡಬೇಕು ಎಂದು ವಿನಂತಿಸಿದ್ದಾರೆ.

ಗಣಿ ಅಕ್ರಮದ ವಿರುದ್ದದ ಹೋರಾಟಗಾರ ಟಪಾಲ್ ಗಣೇಶ್ ಮಾತನಾಡಿ, ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಹಣದ ಕೋಡಿ ಹರಿಯುತ್ತಿದೆ. ಕಾಂಗ್ರೆಸ್ - ಬಿಜೆಪಿ ಪಕ್ಷಗಳು ಹೊಂದಾಣಿಕೆ ಮನೋಭಾವವನ್ನು ತಾಳಿವೆ. ಈ ಚುನಾವಣೆಯಲಿ ಅಂದಾಜು ಕೋಟಿ ರೂ.ಗೂ ಅಧಿಕ ಹಣ ವ್ಯಯಿಸುವವರಿಗೆ ಟಿಕೆಟ್​ ಹಂಚಿಕೆ ಮಾಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೇ ಇಷ್ಟೊಂದು ಮೊತ್ತದ ಹಣ ವ್ಯಯಿಸಿದ್ರೆ, ಅಭಿವೃದ್ಧಿ ಕಾರ್ಯ ಯಾರು ಮಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ABOUT THE AUTHOR

...view details