ಬಳ್ಳಾರಿ:71ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯ ಕೆಂಪು ಕೋಟೆ ಮೇಲೆ ನಮ್ಮ ಪ್ರಧಾನಿಗಳು ಧ್ವಜಾರೋಹಣ ಮಾಡಿದ್ರು ಎಂದು ಸಿರಗುಪ್ಪ ತಹಸೀಲ್ದಾರ್ ಸತೀಶ್, ಧ್ವಜಾರೋಹಣದ ನಂತರದ ಭಾಷಣದಲ್ಲಿ ಮಾತನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.
ಕೆಂಪು ಕೋಟೆ ಮೇಲೆ ಪ್ರಧಾನಿಗಳಿಂದ ಧ್ವಜಾರೋಹಣ: ತಹಸೀಲ್ದಾರ್ ಯಡವಟ್ಟು
71ನೇ ಗಣರಾಜ್ಯೋತ್ಸವ ನಿಮಿತ್ತ ದೆಹಲಿಯ ಕೆಂಪು ಕೋಟೆ ಮೇಲೆ ನಮ್ಮ ಪ್ರಧಾನಿಗಳು ಧ್ವಜಾರೋಹಣ ಮಾಡಿದ್ರು ಎಂದು ಸಿರಗುಪ್ಪ ತಹಸೀಲ್ದಾರ್ ಸತೀಶ್, ಧ್ವಜಾರೋಹಣದ ನಂತರದ ಭಾಷಣದಲ್ಲಿ ಮಾತನಾಡಿ ಯಡವಟ್ಟು ಮಾಡಿಕೊಂಡಿದ್ದಾರೆ.
ಕೆಂಪು ಕೋಟೆ ಮೇಲೆ ಮೋದಿಜಿ ಧ್ವಜಾರೋಹಣ ಮಾಡಿದ್ರು: ತಹಸೀಲ್ದಾರ್ ಹೇಳಿಕೆ ಎಡವಟ್ಟು
ಜಿಲ್ಲೆಯ ಸಿರಗುಪ್ಪ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕಾಡಳಿತದ ವತಿಯಿಂದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವೇದಿಕೆಗೆ ಆಗಮಿಸಿದ ತಹಶೀಲ್ದಾರ್ ಸತೀಶ್ ಬಿ. ಕೂಡಲಗಿ, ರಾಷ್ಟ್ರ ನಾಯಕರ ಭಾವಚಿತ್ರಗಳಿಗೆ ನಮಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ಧ್ವಜಾರೋಹಣ ನೆರವೇರಿಸಿ ನೆರೆದಿದ್ದವರನ್ನುದ್ದೇಶಿಸಿ ಮಾತನಾಡಿ ತಪ್ಪು ಮಾಹಿತಿ ನೀಡಿದರು.
ದೆಹಲಿಯ ಕೆಂಪು ಕೋಟೆ ಮೇಲೆ ತಿವರ್ಣ ಧ್ವಜವನ್ನು ಪ್ರಧಾನಮಂತ್ರಿ ಹಾರಿಸಿದ್ದಾರೆಂದು ಹೇಳಿದರು. ಅವರ ಈ ಹೇಳಿಕೆಯು ನೆರೆದಿದ್ದವರಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು.
Last Updated : Jan 27, 2020, 12:02 PM IST