ಬಳ್ಳಾರಿ: ರಸ್ತೆ ಅಪಘಾತ ಸಂಭವಿಸಿದ ವೇಳೆ ಸಾರ್ವಜನಿಕರು ಯಾವ ರೀತಿ ಪ್ರಥಮ ಚಿಕಿತ್ಸೆ ನೀಡಬೇಕು ಎಂಬುದನ್ನು ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಲಾಯಿತು.
ಇಲ್ಲಿನ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಪೊಲೀಸ್ ಇಲಾಖೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ “31ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ” ಅಂಗವಾಗಿ “ಸೋಶಿಯಲ್ ಎಮರ್ಜೆನ್ಸಿ ರೆಸ್ಪಾನ್ಸ್ ವಾಲಂಟಿಯರ್” ಇವರಿಂದ ರಸ್ತೆ ಅಪಘಾತಗಳ ಬಗ್ಗೆ “ಅಣಕು ಪ್ರದರ್ಶನ” (ಪ್ರಾತ್ಯಕ್ಷಿಕೆ) ನಡೆಸಲಾಯಿತು.
ರಸ್ತೆ ಅಪಘಾತದ ಅಣಕು ಪ್ರದರ್ಶನ ಮೋತಿ ವೃತ್ತದಲ್ಲಿ ಅಣಕು ಪ್ರದರ್ಶನ ನಡೆಯಿತು. ಅಣಕು ಪ್ರದರ್ಶನದಲ್ಲಿ ರಸ್ತೆಯಲ್ಲಿಅಪಘಾತ ಆದಾಗ ಹೇಗೆ ಜೀವರಕ್ಷಣೆ ಮಾಡಬೇಕೆಂದು “ಸರ್ವ್” ತಂಡದವರು ಗಾಯಾಳುಗಳಿಗೆ ಪ್ರಥಮ ಚಿಕಿತ್ಸೆ ನೀಡಿ ಆಂಬುಲೆನ್ಸ್ಗೆ ಶಿಫ್ಟ್ ಮಾಡುವ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.
ಕಾರ್ಯಕ್ರಮದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಎಂ.ಎ.ಷಕೀಬ್, ಹರಿ ಶಂಕರ್, ಉಮಾಮಹೇಶ್ವರಿ, ಇಜಾಝ್ ಅಹಮದ್, ಶಿವ ಸಾಗರ್, ಎಂ.ವಲಿ ಬಾಷಾ, ಕೆ.ನರಸಿಂಹ ರೆಡ್ಡಿ, ಮಂಜುನಾಥ್ ಮತ್ತು ಅನೇಕ ಸರ್ವ್ ತಂಡದವರು ಇದ್ದರು.