ಕರ್ನಾಟಕ

karnataka

ETV Bharat / state

ನನ್ನ ಜನ್ಮದಿನದಂದು ಯಾರೂ ಮನೆ ಬಳಿ ಬರಬೇಡಿ: ಎಂಎಲ್​ಸಿ ಕೊಂಡಯ್ಯ ಮನವಿ - Birthday celebration

ನನ್ನ ಹುಟ್ಟುಹಬ್ಬದಂದು ಯಾರೂ ಮನೆ ಬಳಿ ಬರಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ  ಪತ್ರಿಕಾ ಪ್ರಕಟಣೆ
ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಪತ್ರಿಕಾ ಪ್ರಕಟಣೆ

By

Published : Jul 7, 2020, 1:16 PM IST

ಬಳ್ಳಾರಿ:ಜುಲೈ 10ರಂದು ನನ್ನ ಹುಟ್ಟುಹಬ್ಬವಿದ್ದು, ಆ ದಿನ ಯಾರೂ ಮನೆ ಬಳಿ ಬರಬೇಡಿ. ನಾನೆಂದೂ ಹುಟ್ಟುಹಬ್ಬ ಆಚರಿಸಿಕೊಂಡಿಲ್ಲ ಎಂದು ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ‌ ಮಾಡಿರುವ ಅವರು, ಜುಲೈ 10 ರಂದು ನನ್ನ ಜನ್ಮದಿನ. ನನ್ನ ಸ್ನೇಹಿತರು ಮತ್ತು ಅಭಿಮಾನಿಗಳು ಆ ದಿನದಂದು ನನ್ನ ಮನೆಗೆ ಆಗಮಿಸಿ ಶುಭಕೋರುತ್ತಿದ್ದರು. ಈ ಬಾರಿ ಕೋವಿಡ್-19 ಮಹಾಮಾರಿ ಇಡೀ ಬ್ರಹ್ಮಾಂಡವನ್ನೇ ಆವರಿಸಿಕೊಂಡಿದ್ದು, ಮಾಸ್ಕ್ ಹಾಕಿಕೊಳ್ಳೋದು, ಸಾಮಾಜಿಕ ಅಂತರವನ್ನು ಕಾಪಾಡುವುದು ಅನಿವಾರ್ಯವಾಗಿರುತ್ತದೆ. ಈ ಹಿನ್ನಲೆಯಲ್ಲಿ ರಾಜ್ಯದ ಅನೇಕ ಭಾಗಗಳಿಂದ ಅಭಿಮಾನಿಗಳು ನನಗೆ ಶುಭಕೋರಲು ಬರಬೇಡಿ ಎಂದು ಮನವಿ ಮಾಡಿದ್ದಾರೆ.

ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಪತ್ರಿಕಾ ಪ್ರಕಟಣೆ

ನಿಮ್ಮ ಅಭಿಮಾನ ಸದಾ ನನ್ನ ಮೇಲಿರುತ್ತದೆ ಎಂದು ನನಗೆ ತಿಳಿದಿದೆ ಎಂದು ಪ್ರಕಟಣೆಯಲ್ಲಿ ಕೊಂಡಯ್ಯ ಹೇಳಿದ್ದಾರೆ.

ABOUT THE AUTHOR

...view details